ಸ್ಯಾನ್ಫ್ರಾನ್ಸಿಸ್ಕೋ: ಟೆಸ್ಲಾ ಸಿಇಒ ಈಲಾನ್ ಮಸ್ಕ್ ಮತ್ತು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ವಿಟರ್ ಬಳಕೆದಾರ ಟ್ರಂಗ್ ಫನ್ ಹಂಚಿಕೊಂಡಿರುವ ಈ ಫೋಟೋ, ಮಸ್ಕ್ ಟ್ವೀಟ್‌ಗೆ ನೀಡಿದ ಪ್ರತಿಕ್ರಿಯೆ ಹಂಚಿಕೊಂಡ ನಂತರ ಎಲ್ಲರ ಗಮನ ಸೆಳೆಯಿತು.

ಮಸ್ಕ್ ಕೂಡ ಚಿತ್ರಕ್ಕೆ ಉತ್ತರಿಸುತ್ತಾ, 17 ವರ್ಷಗಳ ಹಿಂದೆ ತೆಗೆದ ಫೋಟೋವನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. "ವಾಹ್, ಅದನ್ನು ನಂಬಲು ಕಷ್ಟ 17 ವರ್ಷಗಳ ಹಿಂದೆ!" ಎಂದು ಮಸ್ಕ್ ಟ್ವಿಟರ್ನಲ್ಲಿ ಬರೆದು ಕೊಂಡಿದ್ದಾರೆ.
2004ರಲ್ಲಿ ಈಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರು ಚರ್ಚಿಸಲು ಊಟದ ಸಮಯದಲ್ಲಿ ಭೇಟಿಯಾದರು. ಇದು ಅವರ ಕೆಲವೇ ವೈಯಕ್ತಿಕ ಸಂವಹನಗಳಲ್ಲಿ ಒಂದಾಗಿದೆ. ಅವರು ನಡೆಸಿದ ಸಂಭಾಷಣೆಯು ಬಾಹ್ಯಾಕಾಶ ಶೋಧನೆಯಲ್ಲಿ ಅವರು ತೆಗೆದುಕೊಂಡ ವಿಭಿನ್ನ ವಿಧಾನಗಳನ್ನು ಸೆರೆಹಿಡಿಯುತ್ತದೆ ಎಂದು ಟ್ರಂಗ್ ಫನ್ ಅವರು ಫೋಟೋ ಹಂಚಿಕೊಂಡು ಬರೆದಿದ್ದಾರೆ.