ನವದೆಹಲಿ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯ 705 ಕೋಟಿ ರೂ. ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಜಿವಿಕೆ ಗ್ರೂಪ್ ಹಾಗೂ ಮಿಯಾಲ್ ಪ್ರವರ್ತಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಇಡಿ ಅಧಿಕಾರಿಗಳು ಮುಂಬೈ ಮತ್ತು ಹೈದರಾಬಾದ್‌ನ ಒಂಬತ್ತು ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದ್ದಾರೆ. ಜಿವಿಕೆ ಸಮೂಹ ಸಂಸ್ಥೆಗಳು ಮತ್ತು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಕಚೇರಿಗಳಲ್ಲಿ ಶೋಧ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.