ಕರ್ನಾಟಕ

karnataka

ETV Bharat / business

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ಸಿಂಘಾಲ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ ಇಡಿ - ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯವು ಭೂಷಣ್ ಪವರ್ ಮತ್ತು ಸ್ಟೀಲ್ ಲಿಮಿಟೆಡ್​ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಸಿಂಘಾಲ್ ಅವರ ವಿರುದ್ಧ 4,025.23 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್ ಸಲ್ಲಿಸಿದೆ.

BPSL CMD Singal
ಸಂಜಯ್ ಸಿಂಘಾಲ್

By

Published : Jan 17, 2020, 7:26 PM IST

ನವದೆಹಲಿ: ಭೂಷಣ್ ಪವರ್ ಮತ್ತು ಸ್ಟೀಲ್ ಲಿಮಿಟೆಡ್​ಗೆ (ಬಿಪಿಎಸ್ಎಲ್) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದೆ.

ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಬಹುಕೋಟಿ ಬ್ಯಾಂಕ್ ಸಾಲ ವಂಚನೆ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಬಿಪಿಎಸ್‌ಎಲ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಸಿಂಘಾಲ್ ಅವರು ವಿವಿಧ ಬ್ಯಾಂಕ್​ಗಳಿಂದ ಸಾಲದ ಸೋಗಿನಲ್ಲಿ 4,025.23 ಕೋಟಿ ರೂ. ಪಡೆದಿದ್ದರು ಎಂಬ ಆರೋಪದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿತ್ತು.

ಒಡಿಶಾದಲ್ಲಿರುವ ಬಿಪಿಎಸ್ಎಲ್ ಆಸ್ತಿಯನ್ನು ಇಡಿ, 2019ರ ಜುಲೈನಲ್ಲಿ 4,025 ಕೋಟಿ ರೂ. ಮೌಲ್ಯದ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳಿಗೆ ಒಳಪಡಿಸಿಕೊಂಡಿತ್ತು. ಬಿಪಿಎಸ್‌ಎಲ್‌ನ ಘಟಕಗಳು, ಯಂತ್ರೋಪಕರಣಗಳು, ಆಸ್ತಿ ಮತ್ತು ಕಟ್ಟಡಗಳನ್ನು ಪ್ರಕರಣದಲ್ಲಿ ಲಗತ್ತಿಸಿಕೊಂಡಿದೆ.

ABOUT THE AUTHOR

...view details