ಕರ್ನಾಟಕ

karnataka

ETV Bharat / business

ರಾಣಾ ಕಪೂರ್, ಇತರರ ವಿರುದ್ಧ 2,200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಕೇಸ್ - ಯೆಸ್​ ಬ್ಯಾಂಕ್ ಪಿಎಂಎಲ್​ಎ ಕೇಸ್

ಕಪೂರ್‌ ಅವರ ಕೆಲವು ವಿದೇಶಿ ಆಸ್ತಿಗಳನ್ನೂ ಸಹ ಕೇಂದ್ರದ ತನಿಖಾ ಸಂಸ್ಥೆ ಸ್ಥಗಿತಗೊಳಿಸಿದೆ. ಕಪೂರ್ ಅವರ ಕುಟುಂಬ ಸದಸ್ಯರು ಮತ್ತು ಇತರರು ತಮ್ಮ ಬ್ಯಾಂಕ್ ಮೂಲಕ ದೊಡ್ಡಮಟ್ಟದ ಸಾಲ ನೀಡುವ ಬದಲು ಕಿಕ್‌ಬ್ಯಾಕ್ ಸ್ವೀಕರಿಸುವ ಮೂಲಕ 4,300 ಕೋಟಿ ರೂ. ಮೌಲ್ಯದಷ್ಟು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಇಡಿ ದೂರಿದೆ.

Rana Kapoor
ರಾಣಾ ಕಪೂರ್

By

Published : Jul 9, 2020, 5:05 PM IST

ನವದೆಹಲಿ: ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ವಿರುದ್ಧ ಸುಮಾರು 2,203 ಕೋಟಿ ರೂ. ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮನಿ ಲಾಂಡರಿಂಗ್ ವಿರೋಧಿ ಕಾನೂನಿನಡಿಯಲ್ಲಿ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದ (ಪಿಎಂಎಲ್‌ಎ) ಅಡಿಯಲ್ಲಿ ಹೊರಡಿಸಲಾದ ತಾತ್ಕಾಲಿಕ ಆದೇಶದ ಭಾಗವಾಗಿ ಡಿಎಚ್‌ಎಫ್‌ಎಲ್ ಪ್ರವರ್ತಕ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರ ಆಸ್ತಿಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ಕಪೂರ್‌ ಅವರ ಕೆಲವು ವಿದೇಶಿ ಆಸ್ತಿಗಳನ್ನು ಸಹ ಕೇಂದ್ರ ಸಂಸ್ಥೆ ಸ್ಥಗಿತಗೊಳಿಸಿದೆ. ಕಪೂರ್ ಅವರ ಕುಟುಂಬ ಸದಸ್ಯರು ಮತ್ತು ಇತರರು ತಮ್ಮ ಬ್ಯಾಂಕ್ ಮೂಲಕ ದೊಡ್ಡಮಟ್ಟದ ಸಾಲ ನೀಡುವ ಬದಲು ಕಿಕ್‌ಬ್ಯಾಕ್ ಸ್ವೀಕರಿಸುವ ಮೂಲಕ 4,300 ಕೋಟಿ ರೂ. ಮೌಲ್ಯದಷ್ಟು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಮಾರ್ಚ್​ನಲ್ಲಿ ಕಪೂರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ABOUT THE AUTHOR

...view details