ಕರ್ನಾಟಕ

karnataka

ETV Bharat / business

ವಿದೇಶಿ ಕಂಪನಿಗಳತ್ತ BSNL ಒಲವು ಆರೋಪ: 9,000 ಕೋಟಿ ರೂ. ಟೆಂಡರ್​​ ತಡೆಗೆ ಮನವಿ

ಟೆಲಿಕಾಂ ಸಲಕರಣೆ ಮತ್ತು ಸೇವೆಗಳ ರಫ್ತು ಉತ್ತೇಜನ ಮಂಡಳಿ (ಟಿಇಪಿಸಿ) ಟೆಲಿಕಾಂ ಇಲಾಖೆ (ಡಿಒಟಿ) ಮತ್ತು ಡಿಪಿಐಐಟಿಗೆ ಬಿಎಸ್‌ಎನ್‌ಎಲ್ ವಿರುದ್ಧ ದೂರು ದಾಖಲಿಸಿದ್ದು, ಟೆಂಡರ್ ಸಂಗ್ರಹಕ್ಕಾಗಿ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ. ವಿದೇಶಿ ಕಂಪನಿಗಳಿಗೆ ಅನುಕೂಲಕರವಾಗಿದೆ ಎಂದು ಆರೋಪಿಸಿದೆ.

By

Published : May 5, 2020, 9:49 PM IST

BSNL telecom
ಬಿಎಸ್​ಎನ್​ಎಲ್​

ನವದೆಹಲಿ: ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯು (ಡಿಪಿಐಐಟಿ) ಟೆಲಿಕಾಂ ಇಲಾಖೆ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ 9,000 ಕೋಟಿ ರೂ. ಮೌಲ್ಯದ 4 ಜಿ ನೆಟ್‌ವರ್ಕ್ ಸ್ಥಾಪಿಸುವ ಟೆಂಡರ್ ತಡೆ ಹಿಡಿಯುವಂತೆ ಕೋರಿದೆ.

ದೇಶಿಯ ಟೆಲಿಕಾಂ ಉತ್ಪನ್ನಗಳು, ಉಪಕರಣಗಳು ಮತ್ತು ಸೇವೆಗಳ ಪ್ರಚಾರಕ್ಕಾಗಿ ಸರ್ಕಾರಿ ಸಂಸ್ಥೆಯಾದ ಟಿಇಪಿಸಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

4 ಜಿ ನೆಟ್‌ವರ್ಕ್ ಸ್ಥಾಪನೆಗಾಗಿ ಹೊಸ ನಿರ್ವಹಣೆಯಡಿ ಮಾರ್ಚ್‌ನಲ್ಲಿ ಬಿಎಸ್‌ಎನ್‌ಎಲ್ ಟೆಂಡರ್ ರೂಪಿಸಲಾಗಿತ್ತು. 2019ರ ಅಕ್ಟೋಬರ್‌ನಲ್ಲಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗೆ 68,751 ಕೋಟಿ ರೂ. ಪರಿಹಾರ ಪ್ಯಾಕೇಜ್​ಅನ್ನು ಸರ್ಕಾರ ಘೋಷಿಸಿದ ನಂತರ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಹೊರಡಿಸಿದ ಮೊದಲ ಟೆಂಡರ್ ಇದಾಗಿದೆ.

ಟೆಲಿಕಾಂ ಸಲಕರಣೆ ಮತ್ತು ಸೇವೆಗಳ ರಫ್ತು ಉತ್ತೇಜನ ಮಂಡಳಿ (ಟಿಇಪಿಸಿ) ಟೆಲಿಕಾಂ ಇಲಾಖೆ (ಡಿಒಟಿ) ಮತ್ತು ಡಿಪಿಐಐಟಿಗೆ ಬಿಎಸ್‌ಎನ್‌ಎಲ್ ವಿರುದ್ಧ ದೂರು ದಾಖಲಿಸಿದ್ದು, ಟೆಂಡರ್ ಸಂಗ್ರಹಕ್ಕಾಗಿ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ. ವಿದೇಶಿ ಕಂಪನಿಗಳಿಗೆ ಅನುಕೂಲಕರವಾಗಿದೆ ಎಂದು ಆರೋಪಿಸಿದೆ.

ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಾರ್ವಜನಿಕ ಖರೀದಿ (ಮೇಕ್ ಇನ್ ಇಂಡಿಯಾ) ಸರ್ಕಾರದ ಆದೇಶವನ್ನು ನಿರ್ಲಕ್ಷಿಸುತ್ತಿವೆ. ಟೆಂಡರ್ ಫ್ಲೋಟೆಡ್ ಸರ್ಕಾರದ ಆದೇಶವನ್ನು ಅನುಸರಿಸಲು ಯಾವುದೇ ಅವಕಾಶ ಹೊಂದಿಲ್ಲ ಎಂದು ಟಿಇಪಿಸಿ ದೂರಿದೆ.

ABOUT THE AUTHOR

...view details