ಕರ್ನಾಟಕ

karnataka

ETV Bharat / business

ಹಬ್ಬದ ಸೀಸನ್​ನಲ್ಲಿ ಭರ್ಜರಿ ಆಫರ್​ ಕೊಡ್ತಿರುವ ಫ್ಲಿಪ್​ಕಾರ್ಟ್​, ಅಮೆಜಾನ್​ಗೆ ಡಿಪಿಐಐಟಿ​ ವಾರ್ನ್​ - FDI

ಸಾಲು-ಸಾಲು ಹಬ್ಬಗಳ ಸೀಸನ್​ ವೇಳೆ ಮೆಗಾ ಫೆಸ್ಟ್​ ಮಾರಾಟದಂದು ವಿಶೇಷ ರಿಯಾಯಿತಿ ಕೊಡುವ ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್, ಎಫ್​​ಡಿಐ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಸಿಎಐಟಿಯು ಡಿಪಿಐಐಟಿಗೆ ಹಲವು ಬಾರಿ ದೂರುಗಳನ್ನು ನೀಡಿತ್ತು. ಈ ದೂರಿನ ಅನ್ವಯ, ಉದ್ಯಮಗಳು ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ಈ ಎರಡೂ ಇ- ಕಾಮರ್ಸ್​​ಗಳಿಗೆ ತಮ್ಮ ಬಂಡವಾಳ ರಚನೆ, ವ್ಯವಹಾರ ಮಾದರಿ ಮತ್ತು ದಾಸ್ತಾನು ನಿರ್ವಹಣಾ ವ್ಯವಸ್ಥೆಯ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಿವೆ.

ಸಾಂದರ್ಭಿಕ ಚಿತ್ರ

By

Published : Oct 20, 2019, 5:45 PM IST

ನವದೆಹಲಿ: ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತಮ್ಮ ಪ್ಲಾಟ್‌ಫಾರ್ಮ್‌ನ ಅಗ್ರ ಐದು ಮಾರಾಟಗಾರರ ಹೆಸರು, ಆದ್ಯತೆಯ ಮಾರಾಟಗಾರರ ಸರಕುಗಳ ದರ ಪಟ್ಟಿ ಮತ್ತು ಮಾರಾಟಗಾರರಿಗೆ ಯಾವ ರೀತಿಯ ಬೆಂಬಲ ನೀಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವಂತಹ ಸೂಚನೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯಮಗಳು ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು (ಡಿಪಿಐಐಟಿ) ಈ ಎರಡೂ ಇ- ಕಾಮರ್ಸ್​​ಗಳಿಗೆ ತಮ್ಮ ಬಂಡವಾಳ ರಚನೆ, ವ್ಯವಹಾರ ಮಾದರಿ ಮತ್ತು ದಾಸ್ತಾನು ನಿರ್ವಹಣಾ ವ್ಯವಸ್ಥೆಯ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಿದೆ.

ಸಾಲು-ಸಾಲು ಹಬ್ಬಗಳ ಸೀಸನ್​ ವೇಳೆ ಮೆಗಾ ಫೆಸ್ಟ್​ ಮಾರಾಟದಂದು ವಿಶೇಷ ರಿಯಾಯಿತಿ ಕೊಡುವ ಇ-ಕಾಮರ್ಸ್ ಕಂಪನಿಗಳು, ವಿದೇಶಿ ನೇರ ಹೂಡಿಕೆ (ಎಫ್​​ಡಿಐ) ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಡಿಪಿಐಐಟಿಗೆ ಹಲವು ಬಾರಿ ದೂರುಗಳನ್ನು ನೀಡಿತ್ತು. ಈ ದೂರಿನ ಅನ್ವಯ ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​ಗೆ ಸೂಚನೆ ನೀಡಲಾಗಿದೆ.

ಈ ವಿಷಯದ ಕುರಿತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಕಳುಹಿಸಿದ ಇ-ಮೇಲ್ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲ. ಸಿಎಐಟಿ ಈ ಕಂಪನಿಗಳು ಸ್ಪರ್ಧಾತ್ಮಕ ಬೆಲೆಯ ನೀತಿಗಳನ್ನು ಮೀರಿ ತಮ್ಮದೇಯಾದ ದರ ನಿಗದಿಪಡಿಸುವ ಮೂಲಕ ನ್ಯಾಯಯುತವಲ್ಲದ ನಡೆಗಳನ್ನು ಅನುಸರಿಸುತ್ತವೆ ಎಂದು ಸತತವಾಗಿ ಆರೋಪಿಸಿಕೊಂಡು ಬರುತ್ತಿವೆ ಎಂಬ ಆರೋಪಗಳಿವೆ.

ಡಿಪಿಐಐಟಿ ಈ ಕಂಪನಿಗಳ ಮತ್ತು ಸಿಎಐಟಿ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಹಲವು ಸಭೆಗಳನ್ನು ನಡೆಸಿದೆ. ವಾಲ್​ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್​ ವಿರುದ್ಧ ಪರಭಕ್ಷಕ ಬೆಲೆ ನಿಗದಿ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ABOUT THE AUTHOR

...view details