ನವದೆಹಲಿ:ಭಾರತದ ಕುಸ್ತಿಪಟು ರಿತು ಪೋಗಟ್ ಅವರು ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್ಶಿಪ್ನ ತಮ್ಮ ಪದಾರ್ಪಣೆಯ ಪಂದ್ಯದಲ್ಲಿ ಜಯದ ಶುಭಾರಂಭ ಮಾಡಿದ್ದರು. ಈ ಪಂದ್ಯದ ವಿಡಿಯೋ ತುಣುಕು ಪುರುಷರಿಗೆ ಸಂದೇಶವೆಂದು ಉದ್ಯಮಿ ಆನಂದ್ ಮಹೀಂದ್ರ ಹೇಳಿದ್ದಾರೆ.
ಆನಂದ್ ಮಹೀಂದ್ರ ಟ್ವೀಟ್ಗೆ ಪುರುಷರು ಸ್ಟನ್... ಹುಡುಗಿಯರನ್ನು ಚುಡಾಯಿಸುವ ಮುನ್ನ ಈ ಮೆಸೇಜ್ ಓದಿ - ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್ಶಿಪ್
ಚೀನಾದ ಬೀಜಿಂಗ್ನಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ರಿತು ಪೋಗಟ್ ಅವರು ದಕ್ಷಿಣ ಕೊರಿಯಾದ ನಮ್ ಹೀ ಕಿಮ್ ವಿರುದ್ಧ ತಾಂತ್ರಿಕ ನಾಕೌಟ್ ಆಧಾರದಲ್ಲಿ ಜಯಿಸಿದ್ದರು. ಎದುರಾಳಿ ಆಟಗಾರ್ತಿ ಮೇಲೆ ರಿತು ದಾಳಿ ಮಾಡುವ ವಿಡಿಯೋ ಅನ್ನು ಉದ್ಯಮ ಆನಂದ್ ಮಹೀಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಪುರುಷರಿಗೆ ಎಚ್ಚರಿಕೆ ನೀಡಿದ್ದಾರೆ.

ರಿತು ಫೋಗಟ್ ಅವರು ಎದುರಾಳಿಯನ್ನು ನಾಮ್ ಹೀ ಕಿಮ್ ಅವರನ್ನು ಕೇವಲ ಮೂರು ನಿಮಿಷಗಳಲ್ಲಿ ಸೋಲಿಸಿದ್ದರು. ಈ ಬಗ್ಗೆ ಆನಂದ್ ಮಹೀಂದ್ರ, 'ಪುರುಷರಿಗಾಗಿ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮಿಶ್ರ ಮಾರ್ಷಲ್ ಆರ್ಟ್ಸ್ ಮರೆತುಬಿಡಿ ಮತ್ತು ಇಲ್ಲಿ ಗಮನವಿಟ್ಟು ನೋಡಿ. ಅವಳು ಕೇವಲ ತನ್ನ ಎದುರಾಳಿಯನ್ನು ಹೊಡೆದಿಲ್ಲ, ಸ್ಟೀರಿಯೊಟೈಪ್‌ಗಳನ್ನು ಹೊಡೆದಿದ್ದಾಳೆ. ಸಂದೇಶವು ಸ್ಪಷ್ಟವಾಗಿದೆ (ವಿಶೇಷವಾಗಿ ಭಾರತೀಯ ಪುರುಷರಿಗೆ) ಭಾರತೀಯ ಮಹಿಳೆಯರೊಂದಿಗೆ ಗೊಂದಲಗೊಳ್ಳಬೇಡಿ' ಎಂದು ಪುರುಷರಿಗೆ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ.