ಕರ್ನಾಟಕ

karnataka

ETV Bharat / business

ಜಿಯೋದಿಂದ ದೀಪಾವಳಿಗೆ ಬಂಪರ್​ ಆಫರ್​: ಆ ಧಮಾಕ ಏನು ಗೊತ್ತೆ? - ರಿಲಯನ್ಸ್​ ಜಿಯೋ

ರಿಲಯನ್ಸ್‌ನ 4ಜಿ ಫೀಚರ್​​ ಫೋನ್ ಪ್ರಸ್ತುತ ₹ 1,500ಗೆ ಮಾರಾಟ ಆಗುತ್ತಿದೆ. ಇದನ್ನು ದೀಪಾವಳಿಯ ಕೊಡುಗೆಯಾಗಿ ಕೇವಲ 699 ರೂ.ಗೆ ಮಾರಾಟ ಮಾಡಲಿದೆ ಕಂಪನಿ. ಹಬ್ಬದ ಕೊಡುಗೆಯಂದು ಜಿಯೋಗೆ ಸೇರುವ ಗ್ರಾಹಕರಿಗೆ ಜಿಯೋ 700 ರೂ. ಮೌಲ್ಯದ ಡೇಟಾ ಪ್ರಯೋಜನ ನೀಡುತ್ತದೆ. ಮೊದಲ 7 ರೀಚಾರ್ಜ್‌ಗಳಿಗೆ ಜಿಯೋ ಹೆಚ್ಚುವರಿಯಾಗಿ 99 ರೂ. ಮೌಲ್ಯದ ಡೇಟಾ ಸೇರ್ಪಡೆ ಆಫರ್​ ನೀಡುತ್ತಿದೆ. ಜಿಯೋಫೋನ್‌ ಮೇಲೆ 800 ರೂ. ಉಳಿತಾಯ ಮತ್ತು 700 ರೂ. ಮೌಲ್ಯದ ಡೇಟಾದಿಂದ 1,500 ರೂ. ಉಳಿತಾಯ ಆದಂತಾಗುತ್ತದೆ.

ಸಾಂದರ್ಭಿಕ ಚಿತ್ರ

By

Published : Oct 3, 2019, 9:36 AM IST

ನವದೆಹಲಿ: ದೇಶದಲ್ಲಿನ ಸಾಲು - ಸಾಲು ಹಬ್ಬಗಳನ್ನು ಮುಂದಿಟ್ಟುಕೊಂಡು ಇ-ಕಾಮರ್ಸ್​ ಕಂಪನಿಗಳು ಕೋಟಿ- ಕೋಟಿ ರೂ. ಬಾಚಿಕೊಳ್ಳುತ್ತಿದ್ದರೇ ರಿಲಯನ್ಸ್​ ಜಿಯೋ ಇನ್ಫೋಕಾಮ್​ ಕೂಡ ದೀಪಾವಳಿ ಹಬ್ಬದ ವಿಶೇಷ ಕೊಡುಗೆಯನ್ನು ಘೋಷಿಸಿದೆ.

ರಿಲಯನ್ಸ್‌ನ 4ಜಿ ಫೀಚರ್​​ ಫೋನ್ ಪ್ರಸ್ತುತ ₹ 1,500 ಮಾರಾಟ ಆಗುತ್ತಿದೆ. ಇದನ್ನು ದೀಪಾವಳಿಯ ಕೊಡುಗೆಯಾಗಿ ಕೇವಲ 699 ರೂ.ಗೆ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ 800 ರೂ. ಉಳಿತಾಯ ಆಗಲಿದೆ. ಈ ಬೆಲೆಯು ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ 2ಜಿ ಫೀಚರ್ ಫೋನ್‌ಗಳಿಗಿಂತ ಕಡಿಮೆಯಾಗಿದೆ.

ದೀಪಾವಳಿ ಕೊಡುಗೆ ಮೂಲಕ ಜಿಯೋಗೆ ಸೇರುವ ಗ್ರಾಹಕರಿಗೆ ಜಿಯೋ 700 ರೂ. ಮೌಲ್ಯದ ಡೇಟಾ ಪ್ರಯೋಜನ ನೀಡುತ್ತದೆ. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್‌ಗಳಿಗೆ ಜಿಯೋ ಹೆಚ್ಚುವರಿಯಾಗಿ 99 ರೂ. ಮೌಲ್ಯದ ಡೇಟಾ ಸೇರ್ಪಡೆ ಮಾಡಲಿದೆ. ಜಿಯೋಫೋನ್‌ನಲ್ಲಿ 800 ರೂ. ಉಳಿತಾಯ ಮತ್ತು 700 ರೂ. ಮೌಲ್ಯದ ಡೇಟಾ ಪ್ರತಿ ಜಿಯೋಫೋನ್‌ನಲ್ಲಿ 1,500 ರೂ. ಉಳಿತಾಯ ಆಗಲಿದೆ.

ABOUT THE AUTHOR

...view details