ನವದೆಹಲಿ :2021-22ರ ಅವಧಿಯಲ್ಲಿ 1.75 ಲಕ್ಷ ಕೋಟಿ ರೂ. ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯದ ಗುರಿ ಸಾಧಿಸಬಹುದಾಗಿದ್ದು, ಅದರ ಗುರಿ ಸನ್ನಿಹಿತವಾಗಿದೆ ಎಂದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್, ಎಲ್‌ಐಸಿಯ ಪ್ರಸ್ತಾವಿತ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) 1 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ ಗುರಿಯಾಗಿಸಿಕೊಂಡ ಚಿಲ್ಲರೆ ಹಣದುಬ್ಬರ ನಿಯಂತ್ರಣ, ಹಣದುಬ್ಬರದ ಚಂಚಲತೆ ಮತ್ತು ಮಟ್ಟವನ್ನು ತಗ್ಗಿಸಲು ನೆರವಾಗಿದೆ ಎಂದರು. ಆರ್‌ಬಿಐನ ಹಣಕಾಸು ನೀತಿ ಸಮಿತಿಯು 2021ರ ಮಾರ್ಚ್ 31ರವರೆಗೆ ವಾರ್ಷಿಕ ಹಣದುಬ್ಬರವನ್ನು ಶೇ.4ರಂತೆ ಕಾಯ್ದುಕೊಳ್ಳಲು ಆದೇಶಿಸಿದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ಸುಬ್ರಮಣಿಯನ್, 2021-22ರ ಅವಧಿಯಲ್ಲಿ 1.75 ಲಕ್ಷ ಕೋಟಿ ರೂ.ಗಳ ಹೂಡಿಕೆ ಹಿಂತೆಗೆತದ ಗುರಿ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ್ದು 2.10 ಲಕ್ಷ ಕೋಟಿ ರೂ.ಯಾಗಿದೆ ಎಂದರು.