ಚೆನ್ನೈ:ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಅಧ್ಯಕ್ಷರ ಹೆಸರನ್ನು ಬ್ಯಾಂಕ್ಗಳ ಮಂಡಳಿ ಶಿಫಾರಸು ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮುಂದಿನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರಾ ಅವರನ್ನು ಬ್ಯಾಂಕ್ಗಳ ಮಂಡಳಿ ಶುಕ್ರವಾರ ಸೂಚಿಸಿ ಅಂತಿಮಗೊಳಿಸಿದೆ. ಇದೇ ಹುದ್ದೆಗೆ ಮೀಸಲು ಅಭ್ಯರ್ಥಿ ಚಲ್ಲಾ ಶ್ರೀನಿವಾಸುಲು ಸೆಟ್ಟಿ ಹೆಸರು ಕೂಡಾ ಕೇಳಿ ಬಂದಿದೆ.