ಕರ್ನಾಟಕ

karnataka

ETV Bharat / business

2,647 ಕೋಟಿ ರೂ. ಹಗರಣದಲ್ಲಿ ಖ್ಯಾತ ಕ್ರಿಕೆಟಿಗನ ಹೆಸರು ತಳಕು... ಯಾರು ಈ ಸ್ಟಾರ್​ ಕ್ರಿಕೆಟರ್​? - ಎಂ ಎಸ್​ ಧೋನಿ ಅಮ್ರಪಾಲಿ ಹಗರಣದ ಆರೋಪಿ

ಫ್ಲ್ಯಾಟ್ ನೀಡುವುದಾಗಿ ಹಲವರಿಂದ ಸಾವಿರಾರು ಕೋಟಿ ರೂ. ಪಡೆದು ವಂಚಿಸಿದ ಕಂಪನಿ ವಿರುದ್ಧ ಹೂಡಿಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಧೋನಿ ಅವರನ್ನೂ ಹಗರಣದ ಆರೋಪಿಯನ್ನಾಗಿ ಮಾಡಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

Dhoni
ಧೋನಿ

By

Published : Dec 3, 2019, 12:16 PM IST

Updated : Dec 5, 2019, 11:36 PM IST

ನವದೆಹಲಿ: ರಿಯಲ್​ ಎಸ್ಟೇಟ್ ವ್ಯವಹಾರದ ಅಮ್ರಪಾಲಿ ಗ್ರೂಪ್​ ರಾಯಭಾರಿಯಾಗಿದ್ದಕ್ಕೆ ಇದೀಗ ಮಾಜಿ ನಾಯಕ ಎಂ.ಎಸ್​​.ಧೋನಿ ಅವರು ತಕ್ಕುದಾದ ಬೆಲೆ ತೆರಬೇಕಾಗಿದೆ. ಸಾವಿರಾರು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಅಮ್ರಪಾಲಿ ಕಂಪನಿ ಜೊತೆಗೆ ಧೋನಿ ಹೆಸರೂ ತಳಕು ಹಾಕಿಕೊಂಡಿದೆ.

ಫ್ಲ್ಯಾಟ್ ನೀಡುವುದಾಗಿ ಹಲವರಿಂದ ಸಾವಿರಾರು ಕೋಟಿ ರೂ. ಪಡೆದು ವಂಚಿಸಿದ ಕಂಪನಿ ವಿರುದ್ಧ ಹೂಡಿಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಧೋನಿ ಅವರನ್ನೂ ಹಗರಣದ ಆರೋಪಿಯನ್ನಾಗಿ ಮಾಡಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

ಅಮ್ರಪಾಲಿ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ಶರ್ಮಾ, ಸಮೂಹ ಅಧಿಕಾರಿಗಳಾದ ಶಿವ ಪ್ರಿಯಾ, ಮೋಹಿತ್ ಗುಪ್ತಾ ಮತ್ತು ಇತರರನ್ನು ಎಫ್‌ಐಆರ್​ನಲ್ಲಿ ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ರೂಪೇಶ್ ಕುಮಾರ್ ಸಿಂಗ್ ಅವರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 409, 420 ಮತ್ತು 120ಬಿ ಅಡಿ ಅಪರಾಧ ಉಲ್ಲಂಘನೆ, ಮೋಸ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳು ದಾಖಲಾಗಿವೆ.

ಇಒಡಬ್ಲ್ಯು ಎಫ್‌ಐಆರ್ ಮತ್ತು ಇತರ ಉನ್ನತ ಮೂಲಗಳ ಪ್ರಕಾರ, ಅಮ್ರಪಾಲಿ ಗ್ರೂಪ್​ನ ಮೇಲಾಧಿಕಾರಿಗಳು ಗ್ರಾಹಕರನ್ನು ಮತ್ತು ಹೂಡಿಕೆದಾರರ ಹಣವನ್ನು ಸೆಳೆಯಲು ಆಕರ್ಷಕವಾದ ಆಮಿಷವೊಡ್ಡಿದ್ದಾರೆ. ಈ ಉದ್ದೇಶಕ್ಕಾಗಿ ಧೋನಿಯನ್ನು ಕೌಶಲ್ಯದಿಂದ ಬಳಸಿಕೊಂಡು ಅವರನ್ನು ಅಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದ್ದಾರೆ.

ಅಮ್ರಪಾಲಿ ಜನರ ಹಣವನ್ನು ಹಲವು ಕಂಪನಿಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಆರೋಪವಿದ್ದು, ಇದರಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಮಾಲಿಕತ್ವದ ಕಂಪನಿಯೂ ಸೇರಿದೆ. ಹೀಗಾಗಿ, ಖ‍್ಯಾತ ಕ್ರಿಕೆಟಿಗನ ವಿರುದ್ಧವೂ ಸಂತ್ರಸ್ತರು ದೂರು ದಾಖಲಿಸಿದ್ದಾರೆ. ಈ ಪ್ರಕರಣ ಧೋನಿಗೆ ಕಗ್ಗಂಟಾಗುವ ಸಂಭವವಿದೆ. ಈ ಹಗರಣವು 2,647 ಕೋಟಿ ರೂ.ನಷ್ಟಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಧೋನಿ ಒಡೆತನದ ಅಮ್ರಪಾಲಿ ಮಾಹಿ ಡೆವೆಲಪ​ರ್ಸ್ಸ್ ಹಾಗೂ ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ. ಇದೊಂದು ಶಾಮ್‌ ಡೀಲ್‌ (ನಕಲಿ ಒಪ್ಪಂದ) ಆಗಿದ್ದು, ಈ ಹಣವನ್ನು ವಶಪಡಿಸಿಕೊಳ್ಳಬೇಕು ಎಂದು ವಿಧಿ ವಿಜ್ಞಾನ ಲೆಕ್ಕ ಪರಿಶೋಧಕರು ಈ ಹಿಂದೆಯೇ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು.

ಅಮ್ರಪಾಲಿ ಗ್ರೂಪ್‌ 2009ರಿಂದ 2015ರ ಅವಧಿಯಲ್ಲಿ ರಿತಿ ಸ್ಪೋರ್ಟ್ಸ್​ ಮ್ಯಾನೆಜ್‌ಮೆಂಟ್‌ ಕಂಪನಿಗೆ 42.22 ಕೋಟಿ ರೂ.ಗಳನ್ನು ವರ್ಗಾಯಿಸಿದೆ . ಈ ಹಣದಲ್ಲಿ 6.52 ಕೋಟಿ ರೂ. ಮೊತ್ತವನ್ನು ಅಮ್ರಪಾಲಿ ಶಫೈರ್‌ ಡೆವೆಲಪರ್ರ್ಸ್‌ ಪಾವತಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

Last Updated : Dec 5, 2019, 11:36 PM IST

ABOUT THE AUTHOR

...view details