ಕರ್ನಾಟಕ

karnataka

ETV Bharat / business

ಅಪಘಾತ ವಿಮೆ ಹೆಚ್ಚಳ, ರೂಪೇ ಕಾರ್ಡ್ ವಿತರಣೆ.. ಜನ್‌ಧನ್‌ ಯೋಜನೆಯಡಿ ಹೊಸ ಖಾತೆಗಳ ಹೆಚ್ಚಳ - undefined

ದೇಶದ ಪ್ರತಿಯೊಬ್ಬರನ್ನೂ ಬ್ಯಾಂಕಿಂಗ್‌ ವಲಯಕ್ಕೆ ತರುವ ಉದ್ದೇಶದಿಂದ 2014ರ ಆಗಸ್ಟ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನಮಂತ್ರಿ ಜನ್‌ ಧನ್‌ ಯೋಜನೆಗೆ ಚಾಲನೆ ನೀಡಿದ್ದರು.

ಸಾಂದರ್ಭಿಕ ಚಿತ್ರ

By

Published : Apr 21, 2019, 8:05 PM IST

ನವದೆಹಲಿ: ಪ್ರಧಾನ್ ಮಂತ್ರಿ ಜನ್‌ಧನ್ ಯೋಜನೆಯಡಿ ತೆರೆಯಲಾದ ಖಾತೆಗಳಲ್ಲಿ 2019ರ ಏಪ್ರಿಲ್​ವರೆಗೆ ಠೇವಣೆ ಮೊತ್ತ ₹ 95,382.14 ಕೋಟಿಯಷ್ಟಾಗಿದೆ.

ದೇಶದ ಪ್ರತಿಯೊಬ್ಬರನ್ನೂ ಬ್ಯಾಂಕಿಂಗ್‌ ವಲಯಕ್ಕೆ ತರುವ ಉದ್ದೇಶದಿಂದ 2014ರ ಆಗಸ್ಟ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನಮಂತ್ರಿ ಜನ್‌ ಧನ್‌ ಯೋಜನೆಗೆ ಚಾಲನೆ ನೀಡಿದ್ದರು.

ಶೀಘ್ರದಲ್ಲೇ ಜನ್ ಧನ್ ಖಾತೆಗಳಲ್ಲಿನ ಠೇವಣಿ ಮೊತ್ತ ಶತಕೋಟಿ ದಾಟಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡು ಬರುತ್ತಿತ್ತು. ಅದರಂತೆ ಒಟ್ಟು 35.39 ಕೋಟಿ ಖಾತೆಗಳಲ್ಲಿ 2019ರ ಮಾರ್ಚ್​ 27ರವರೆಗೆ ₹ 96,107.35 ಕೋಟಿಯಷ್ಟು ಮೊತ್ತ ಹರಿದು ಬಂದಿತ್ತು. ಆದರೆ, ವಾರದ ಹಿಂದಿನವರೆಗಿನ ಮಾಹಿತಿ ಅನ್ವಯ ಠೇವಣಿಯ ಮೊತ್ತ ತಗ್ಗಿದ್ದು,₹95,382.14 ಕೋಟಿಯಷ್ಟಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಜನ್ ಧನ್ ಖಾತೆ ಹೊಂದಿರುವವರಿಗೆ ಅಪಘಾತ ವಿಮೆ ಕೂಡ ಲಭ್ಯವಿದ್ದು, ಈ ಮೊತ್ತವನ್ನು ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಮತ್ತಷ್ಟು ಬ್ಯಾಂಕ್ ಅಕೌಂಟ್​ಗಳು ಓಪನ್ ಆಗಿದ್ದು, ಜನವರಿ ವೇಳೆಗೆ ಒಟ್ಟು 35.39 ಕೋಟಿ ಖಾತೆಗಳು ತೆರೆಯಲಾಗಿದೆ. ಈವರೆಗೂ 27.89 ಕೋಟಿ ಖಾತೆದಾರರಿಗೆ ರೂಪೇ ಡೆಬಿಟ್​ ಕಾರ್ಡ್​ ವಿತರಿಸಲಾಗಿದೆ.

For All Latest Updates

TAGGED:

ABOUT THE AUTHOR

...view details