ಕರ್ನಾಟಕ

karnataka

ETV Bharat / business

ಠೇವಣಿದಾರರ ಹಣ ಭದ್ರವಾಗಿದೆ, ಹಣ ವಾಪಸ್​ ತೆಗೆದುಕೊಳ್ಳಬೇಡಿ: ಯೆಸ್​ ಬ್ಯಾಂಕ್​ ಸಿಇಒ - ಆರ್​ಬಿಐ

ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಎಲ್ಲಾ ಎಟಿಎಂಗಳಲ್ಲಿ ನಗದು ಪ್ರಮಾಣ ತುಂಬಿವೆ. ನಮ್ಮ ಎಲ್ಲ ಶಾಖೆಗಳಿಗೆ ಸಾಕಷ್ಟು ಹಣದ ಪೂರೈಕೆ ಇದೆ. ಆದ್ದರಿಂದ, ಯೆಸ್ ಬ್ಯಾಂಕ್ ಕಡೆಯಿಂದ ದ್ರವ್ಯತೆ (ಬಂಡವಾಳ) ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಯೆಸ್​ ಬ್ಯಾಂಕಿನ ನಿಯೋಜಿತ ಸಿಇಒ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

Yes Bank
ಯೆಸ್ ಬ್ಯಾಂಕ್

By

Published : Mar 17, 2020, 8:13 PM IST

ಮುಂಬೈ: ಯೆಸ್​ ಬ್ಯಾಂಕ್​ನ ಬಂಡವಾಳದ ಬಗ್ಗೆ ಯಾರೂ ಚಿಂತಪಡಬೇಕಾಗಿಲ್ಲ. ನಿರ್ವಹಣೆಯು ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಯಲ್ಲಿರಲಿದೆ ಎಂದು ಬ್ಯಾಂಕಿನ ನಿಯೋಜಿತ ಸಿಇಒ ಪ್ರಶಾಂತ್ ಕುಮಾರ್​ ಭರವಸೆ ನೀಡಿದ್ದಾರೆ.

ಹಣಕಾಸಿನ ಬಿಕ್ಕಟ್ಟಿನಿಂದಾಗಿ ಖಾಸಗಿ ವಲಯದ ಖಾಸಗಿ ವಲಯದ ಯೆಸ್​ ಬ್ಯಾಂಕ್ ಮೇಲೆ ಮಾರ್ಚ್​ 5ರಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿ, ಗ್ರಾಹಕರ ಗರಿಷ್ಠ ವಿತ್​ಡ್ರಾ ಮಿತಿಯನ್ನು ₹ 50,000ಕ್ಕೆ ನಿಗದಿಪಡಿಸಿತ್ತು.

ಆರ್​ಬಿಐನ ಅಧಿಸೂಚನೆ ಅನ್ವಯ, ಬ್ಯಾಂಕ್ ಮೇಲಿ ವಿಧಿಸಿದ್ದ ನಿರ್ಬಂಧವು ಮಾರ್ಚ್​ 18ರ ಸಂಜೆ 6 ಗಂಟೆಗೆ ಹಿಂತೆಗೆದುಕೊಳ್ಳಲಾಗುತ್ತದೆ.

ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಎಲ್ಲ ಎಟಿಎಂಗಳಲ್ಲಿ ನಗದು ಪ್ರಮಾಣ ತುಂಬಿವೆ. ನಮ್ಮ ಎಲ್ಲ ಶಾಖೆಗಳಿಗೆ ಸಾಕಷ್ಟು ಹಣದ ಪೂರೈಕೆ ಇದೆ. ಆದ್ದರಿಂದ, ಯೆಸ್ ಬ್ಯಾಂಕ್ ಕಡೆಯಿಂದ ದ್ರವ್ಯತೆ (ಬಂಡವಾಳ) ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಬಂಡವಾಳಕ್ಕಾಗಿ ಬಾಹ್ಯ ಮೂಲಗಳನ್ನು ಅವಲಂಬಿಸುವ ಅಗತ್ಯವಿಲ್ಲ. ಒಂದು ಪ್ರಕರಣ ಸಂಭವಿಸಿದ ನಂತರ ಆ ದ್ರವ್ಯತೆ ರೇಖೆಗಳು ಬ್ಯಾಂಕ್‌ಗೆ ಸಮರ್ಪಕವಾಗಿ ಲಭ್ಯವಿರುತ್ತವೆ. ಹೂಡಿಕೆದಾರರು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಠೇವಣಿದಾರರಿಗೆ ಭರವಸೆ ನೀಡಿದರು.

ನಿರ್ಬಂಧಿತ ಅವಧಿಯಲ್ಲಿ ಮೂರರಲ್ಲಿ ಒಂದು ಪ್ರತಿಶತದಷ್ಟು ಗ್ರಾಹಕರು ಮಾತ್ರ ₹ 50,000 ವಿತ್​ಡ್ರಾ ಮಾಡಿಕೊಂಡಿದ್ದಾರೆ. ಬ್ಯಾಂಕ್ ಪುನಶ್ಚೇತನ ಕರಡು ನೀತಿಗೆ ಆರ್​ಬಿಐ, ಕೇಂದ್ರ ಸರ್ಕಾರ ಹಾಗೂ ಇತರೆ ಹಣಕಾಸು ಸಂಸ್ಥೆಗಳು ನೆರವಾಗಿದ್ದರಿಂದ ಜಸ್ಟ್ 13 ದಿನದಲ್ಲಿ ಬ್ಯಾಂಕ್ ಚೇತರಿಸಿಕೊಂಡಿದೆ.

ABOUT THE AUTHOR

...view details