ಕರ್ನಾಟಕ

karnataka

ETV Bharat / business

ಜೆಟ್​ ಏರ್​ವೇಸ್​ ಸಂಕಷ್ಟ... ಹೊಸ ಮಾಲೀಕರ ಹುಡುಕಾಟಕ್ಕೆ ವಾರದ ಗಡುವು -

ಕೇಂದ್ರ ಸರ್ಕಾರ ತ್ವರಿತವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹಾಗೂ ಆರ್ಥಿಕ ಸಂಕಷ್ಟ ನಿವಾರಿಸಲು ಈ ನಡೆ ತೆಗೆದುಕೊಳ್ಳಲು ಮುಂದಾಗಿದೆ.

ಸಾಂದರ್ಭಿಕ ಚಿತ್ರ

By

Published : May 5, 2019, 8:21 PM IST

Updated : May 5, 2019, 8:48 PM IST

ನವದೆಹಲಿ:ಮುಂದಿನ ವಾರದ ಒಳಗೆ ಹೊಸ ಮಾಲೀಕರನ್ನು ಹುಡುಕಿಕೊಳ್ಳದೇ ಹೋದರೆ ಜೆಟ್​ ಏರ್​ವೇಸ್​ ಅನ್ನು ವಿದೇಶ ಹಾರಾಟದ ಹಕ್ಕುಗಳನ್ನು ಬೇರೆ ಏರ್​ಲೈನ್ಸ್​ಗೆ ವಿತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರ ತ್ವರಿತವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹಾಗೂ ಆರ್ಥಿಕ ಸಂಕಷ್ಟ ನಿವಾರಿಸಲು ಈ ನಡೆ ತೆಗೆದುಕೊಳ್ಳಲು ಮುಂದಾಗಿದೆ.

ಜೆಟ್​ ಏರ್​ವೇಸ್ ಹೊಂದಿರುವ ಅಬುದಾಬಿ, ಥಾಯ್ಲೆಂಡ್​, ದುಬೈ, ಸಿಂಗಾಪುರ ಸೇರಿದಂತೆ ಮತ್ತಿತರ ವಿದೇಶಗಳಿಗೆ ಸಂಬಂಧಿಸಿದ ಹಾರಾಟದ ಹಕ್ಕುಗಳನ್ನು ಇತರೆ ಏರ್​ಲೈನ್ಸ್​ಗಳೀಗೆ ಕ್ಷಿಪ್ರವಾಗಿ ಮಾರಾಟ ಮಾಡಬಹುದು. ಆದರೆ, 'ಜೆಟ್ ಏರ್​ವೇಸ್​ ತನ್ನ ಖರೀದಿದಾರರನ್ನು ಹುಡುಕಿಕೊಳ್ಳಲು ಕಾಯುತ್ತಿದ್ದೇವೆ. ಆ ಹಕ್ಕುಗಳನ್ನು ಇತರೆ ಏರ್​ಲೈನ್ಸ್​ಗಳೀಗೆ ನೀಡಬೇಡಿ ಎನ್ನುವ ಮನವಿಗಳು ಬರುತ್ತಿವೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೆಟ್​ ಏರ್​ವೇಸ್​ನ ಹಿತಾಸಕ್ತಿಯನ್ನು ಕಾಯಬೇಕೆಂದು ಬ್ಯಾಂಕ್​ಗಳು, ಸಿಬ್ಬಂದಿ, ಆಡಳಿತ ವರ್ಗ ಸರ್ಕಾರಕ್ಕೆ ಪತ್ರ ಬರೆದಿವೆ. ಕಳೆದ ತಿಂಗಳು ಜೆಟ್‌ ಸಿಇಒ ವಿನಯ್‌ ದುಬೆ ಅವರು ಸಿಬ್ಬಂದಿ ಜೊತೆಗೆ ವಿತ್ತ ಸಚಿವರನ್ನು ಭೇಟಿ ಮಾಡಿದ್ದಾರೆ. ಜೆಟ್​ ಉಳಿಸುವಂತೆ ಕೋರಿದ್ದಾರೆ.

ಹೊಸ ಮಾಲೀಕರು ಬರುವ ತನಕ ಕಾಯುವಂತೆ ಸರ್ಕಾರಕ್ಕೆ ವಿನಂತಿ ಸಲ್ಲಿಕೆಯಾಗಿದೆ. ಆರಂಭದಲ್ಲಿ ಎತಿಹಾದ್​, ಟಿಪಿಜಿ ಮತ್ತು ಎನ್​ಐಐಎಫ್​ನಿಂದ ಏಟ್​ ಏರ್​ವೇಸ್​ ಖರೀದಿಗೆ ಮುತುವರ್ಜಿ ವಹಿಸಿದ್ದವು. ಆನಂತರ ಬಿಡ್​ ಸಲ್ಲಿಸುವ ವೇಳೆ ಮತ್ತೆ ಬಂದಿರಲಿಲ್ಲ.

Last Updated : May 5, 2019, 8:48 PM IST

For All Latest Updates

TAGGED:

ABOUT THE AUTHOR

...view details