ಕರ್ನಾಟಕ

karnataka

ETV Bharat / business

ಸಾಲದ ಸುನಾಮಿಯಿಂದ ಯೆಸ್​ ಬ್ಯಾಂಕ್ ಪಾರು... ಮಾ.18ಕ್ಕೆ ನಿಷೇಧ ತೆರವು - ಯೆಸ್ ಬ್ಯಾಂಕ್ ಬಿಕ್ಕಟ್ಟು

ನಿರ್ಬಂಧ ತೆರವಿನ ಬಗ್ಗೆ ಯೆಸ್ ಬ್ಯಾಂಕ್ ಟ್ವೀಟ್ ಮಾಡಿದ್ದು, ಮಾರ್ಚ್​ 18ರಿಂದ ನಮ್ಮ ಬ್ಯಾಂಕಿಂಗ್​ ಸೇವೆಗಳು ಮತ್ತೆ ಆರಂಭವಾಗಲಿವೆ. ಮಾ.19ರಿಂದ ಗ್ರಾಹಕರು ವ್ಯವಹಾರ ನಡೆಸಬಹುದಾಗಿದೆ. ಆನ್​ಲೈನ್​ ಬ್ಯಾಂಕಿಂಗ್​ ಸೇವೆ ಸೇರಿ ಎಲ್ಲ ಡಿಜಿಟಲ್​ ಸೇವೆಗಳು ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ.

Yes Bank
ಯೆಸ್ ಬ್ಯಾಂಕ್

By

Published : Mar 16, 2020, 5:52 PM IST

ನವದೆಹಲಿ: ವಸೂಲಾಗದ ಸಾಲದ ಪ್ರಮಾಣ ಏರಿಕೆಯಿಂದ ಹಣಕಾಸು ಬಿಕ್ಕಟ್ಟಿಗೆ ಸಿಲುಕಿ ಆರ್​ಬಿಐನ ವಹಿವಾಟು ನಿರ್ಬಂಧಕ್ಕೆ ಒಳಗಾಗಿದ್ದ ಯೆಸ್ ಬ್ಯಾಂಕ್ ವ್ಯವಹಾರಗಳು ಮಾರ್ಚ್​ 18ರಿಂದ ಮತ್ತೆ ಈ ಮೊದಲಿನಂತೆ ಶುರುವಾಗಲಿವೆ ಎಂದು ಬ್ಯಾಂಕ್ ತಿಳಿಸಿದೆ.

ಕಳೆದ ವಾರ ಯೆಸ್​ ಬ್ಯಾಂಕ್​ ತೀವ್ರ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿತ್ತು. ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ), ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿತ್ತು. ಜೊತೆಗೆ ಗ್ರಾಹಕರಿಗೆ ಗರಿಷ್ಠ ವಿತ್​ಡ್ರಾ ಮಿತಿಯನ್ನು ₹ 50,000ಕ್ಕೆ ನಿಗದಿಪಡಿತ್ತು. ಇದರಿಂದ ಗ್ರಾಹಕರು ತಮಗೆ ಅಗತ್ಯವಾದಷ್ಟು ಹಣ ಪಡೆಯಲು ಪರದಾಡಿದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಆರ್​ಬಿಐ, ಯೆಸ್​ ಬ್ಯಾಂಕ್ ಪುನಶ್ಚೇತನ ಕರುಡು ನೀತಿಯೊಂದನ್ನು ಜಾರಿಗೆ ತಂದಿತ್ತು. ಈ ವೇಳೆ​, ಸಹಾಯಕ್ಕೆ ಬಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಯೆಸ್​ ಬ್ಯಾಂಕ್​ನ ಪ್ರತಿ ಷೇರಿಗೆ 10 ರೂ. ದರದಲ್ಲಿ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಐಸಿಐಸಿಐ ಬ್ಯಾಂಕ್ ಷೇರು ಖರೀದಿಸಿ ಬಂಡವಾಳದ ನೆರವು ನೀಡಿತ್ತು.

ನಿರ್ಬಂಧ ತೆರವಿನ ಬಗ್ಗೆ ಯೆಸ್ ಬ್ಯಾಂಕ್ ಟ್ವೀಟ್ ಮಾಡಿದ್ದು, ಮಾರ್ಚ್​ 18ರಿಂದ ನಮ್ಮ ಬ್ಯಾಂಕಿಂಗ್​ ಸೇವೆಗಳು ಮತ್ತೆ ಆರಂಭವಾಗಲಿವೆ. ಮಾ.19ರಿಂದ ಗ್ರಾಹಕರು ವ್ಯವಹಾರ ನಡೆಸಬಹುದಾಗಿದೆ. ಆನ್​ಲೈನ್​ ಬ್ಯಾಂಕಿಂಗ್​ ಸೇವೆ ಸೇರಿ ಎಲ್ಲ ಡಿಜಿಟಲ್​ ಸೇವೆಗಳು ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ.

ABOUT THE AUTHOR

...view details