ಮುಂಬೈ: ಇನ್ಫೋಸಿಸ್ ಸಿಇಒ ವಿರುದ್ಧ ನ್ಯಾಯುತವಲ್ಲದ ವಹಿವಾಟು ನಡೆಸುತ್ತಿದ್ದಾರೆ ಎಂದು ಆಪಾದಿಸಿ ಅನಾಮಧೇಯ ವ್ಯಕ್ತಿಯೊಬ್ಬರು ಬರೆದ ಪತ್ರದಿಂದ ಷೇರು ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿದು ಹೂಡಿಕೆದಾರರು ಸಾವಿರಾರು ಕೋಟಿ ರೂಪಾಯಿಯಷ್ಟು ಸಂಪತ್ತು ಕರಗಿತ್ತು. ಇದು ನಡೆದ ವಾರ ಕಳೆಯುವ ಮೊದಲೇ ರೇಟಿಂಗ್ಸ್ ಸಂಸ್ಥೆ ತನ್ನ ಕಂಪನಿ ಶ್ರೇಣಿಯನ್ನು ಪ್ರಕಟಿಸಿದೆ.
ಪ್ರಮುಖ ರೇಟಿಂಗ್ಸ್ ಸಂಸ್ಥೆಯಾದ ಕ್ರಿಸಿಲ್, ಇನ್ಫೋಸಿಸ್ನ ದೀರ್ಘಾವಧಿಯ ರೇಟಿಂಗ್‌ನ ಪ್ರಸ್ತುತ 'ಎಎಎ'ನಲ್ಲಿ ಇರಿಸಿದೆ. ಇದು ನಿಯೋಜಿತ ಅತ್ಯುನ್ನತ ರೇಟಿಂಗ್ ಆಗಿದ್ದು ಇತ್ತೀಚಿನ ಬೆಳವಣಿಗೆಯ ಪರಿಣಾಮಗಳ ಮೇಲೂ ಅದು ಕಣ್ಗಾವಲು ಇರಿಸಿದೆ.
ಸಂಸ್ಥೆಯ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ಇನ್ಪೋಸಿಸ್ ಸಂಸ್ಥೆಯ ಸಿಇಒ ಸಲೀಲ್ ಪರೇಖ್ ವಿರುದ್ಧ ದೂರ ನೀಡಿದ್ದಾರೆ. ಪರೇಖ್ ನೈತಿಕವಲ್ಲದ ಮಾರ್ಗದಿಂದ ವಹಿವಾಟು ನಡೆಸುತ್ತಿದ್ದಾರೆ. ಲಾಭದ ಸಂಖ್ಯೆ ಮತ್ತು ಆದಾಯ ಪ್ರಮಾಣ ಹೆಚ್ಚಳವಾಗಿದೆ ಎಂಬುದನ್ನು ವಾಮಮಾರ್ಗದಿಂದ ತೋರಿಸಲಾಗಿದೆ ಎಂದು ಅಮೆರಿಕ ಷೇರುಪೇಟೆಯ ಸೆಕ್ಯುರಿಟೀಸ್ಗೆ ನೀಡಿದ ದೂರಿನಲ್ಲಿ ದಾಖಲಾಗಿದೆ. ಇದರಿಂದ ಇನ್ಫೋಸಿಸ್ಗೆ ಭಾರಿ ನಷ್ಟ ಉಂಟಾಗಿ ಒಂದೇ ದಿನ 55 ಸಾವಿರ ಕೋಟಿಯಷ್ಟು ಸಂಪತ್ತು ಕರಗಿತ್ತು. ಪ್ರಸ್ತುತ, 'ಕ್ರಿಸ್ಸಿಲ್ ರೇಟಿಂಗ್ ಆಧರಿಸಿ ಇನ್ಫೋಸಿಸ್ ಯಾವುದೇ ಸಾಲವನ್ನು ಹೊಂದಿಲ್ಲ' ಎಂದು ತಿಳಿಸಿದೆ.
ದೂರುಗಳಿಗೆ ಸಂಬಂಧಿಸಿದಂತೆ ಇನ್ಫೋಸಿಸ್ ಮಂಡಳಿ ಮತ್ತು ಲೆಕ್ಕಪರಿಶೋಧನಾ ಸಮಿತಿಯು ಕೈಗೊಂಡ ಬೆಳವಣಿಗೆಗಳು ಮತ್ತು ಕ್ರಮಗಳನ್ನು ಕ್ರಿಸಿಲ್ ಗಮನಿಸಲಿದೆ. ಕ್ರಿಸಿಲ್ ಮುಂದಿನ ಪರಿಸ್ಥಿತಿ ಮತ್ತು ಹೆಚ್ಚುವರಿ ಬೆಳವಣಿಗೆಗಳ ಮೇಲೆ ನಿಗಾ ಇರಿಸುವುದನ್ನು ಮುಂದುವರಿಸಲಿದೆ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.