ಕರ್ನಾಟಕ

karnataka

ETV Bharat / business

150 ರೂ.ಗೆ ಕೋವಿಶೀಲ್ಡ್ ಲಸಿಕೆ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ವಿತರಿಸಲಿರುವ ಕೇಂದ್ರ

ಎರಡೂ ಕೋವಿಡ್ -19 ಲಸಿಕೆಗಳಿಗೆ ಭಾರತ ಸರ್ಕಾರದ ಖರೀದಿ ಬೆಲೆ ಪ್ರತಿ ಡೋಸ್‌ಗೆ 150 ರೂ.ನಷ್ಟಿದೆ ಎಂಬುದು ಸ್ಪಷ್ಟವಾಗಿದೆ. ಜಿಒಐ ಸಂಗ್ರಹಿಸಿದ ಡೋಸೇಜ್‌ಗಳನ್ನು ರಾಜ್ಯಗಳಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

Covishield
Covishield

By

Published : Apr 24, 2021, 4:49 PM IST

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆ ಬೆಲೆ ನಿರ್ಧಾರ ವ್ಯಾಜ್ಯದ ನಡುವೆ, ಲಸಿಕೆಯನ್ನು 150 ರೂ.ಗೆ ಖರೀದಿಸುವುದನ್ನು ಮುಂದುವರಿಸುವುದಾಗಿ ಕೇಂದ್ರ ಹೇಳಿದೆ.

ಕೇಂದ್ರದಿಂದ ಸಂಗ್ರಹಿಸಲಾಗುವ ಲಸಿಕೆಯನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದೆ. ಆದರ್​ ಪೂನವಾಲ್ಲಾ-ಹೆಲ್ಮೆಡ್ ಕಂಪನಿಯು ಇತ್ತೀಚೆಗೆ ತನ್ನ ದರಗಳನ್ನು ಪಟ್ಟಿ ಬಿಡಗಡೆ ಮಾಡಿತ್ತು. ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗಳಷ್ಟು ನಿಗದಿ ಮಾಡಿತ್ತು.

ಎರಡೂ ಕೋವಿಡ್ -19 ಲಸಿಕೆಗಳಿಗೆ ಭಾರತ ಸರ್ಕಾರದ ಖರೀದಿ ಬೆಲೆ ಪ್ರತಿ ಡೋಸ್‌ಗೆ 150 ರೂ.ಗಳಷ್ಟಿದೆ ಎಂಬುದು ಸ್ಪಷ್ಟವಾಗಿದೆ. ಜಿಒಐ ಸಂಗ್ರಹಿಸಿದ ಡೋಸೇಜ್‌ಗಳನ್ನು ರಾಜ್ಯಗಳಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

ಭಾರತದಲ್ಲಿ ತಯಾರಿಸಿದ ಪ್ರತಿ ಡೋಸ್‌ಗೆ 600 ರೂ. (8 ಡಾಲರ್​) ದರ ನಿಗದಿಪಡಿಸಲಾಗಿದೆ. ದೇಶೀಯವಾಗಿ ತಯಾರಿಸಿದ ಲಸಿಕೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಬೆಲೆ ಪಾವತಿಸಲಿವೆ. ಅಮೆರಿಕ, ಇಂಗ್ಲೆಂಡ್​​ ಮತ್ತು ಯುರೋಪಿಯನ್ ಒಕ್ಕೂಟದ ಸರ್ಕಾರಗಳು ನೇರವಾಗಿ ಅಸ್ಟ್ರಾಜೆನೆಕಾದಿಂದ ಪಡೆಯುತ್ತಿರುವ ಬೆಲೆಗಿಂತ 400 ರೂ. (5.30 ಡಾಲರ್) ಹೆಚ್ಚಾಗಿದೆ ಎಂದು ಮಾಧ್ಯಮ ವರದಿಯೊಂದನ್ನು ಕಾಂಗ್ರೆಸ್ ಮುಖಂಡ ಜೈರಾಮ್​ ರಮೇಶ್​ ಟ್ವೀಟ್ ಮಾಡಿದ್ದರು.

ಆರೋಗ್ಯ ಇಲಾಖೆ ಟ್ವೀಟ್

ಬಾಂಗ್ಲಾದೇಶ, ಸೌದಿ ಅರೇಬಿಯಾ ಮತ್ತು ದಕ್ಷಿಣ ಆಫ್ರಿಕಾ ಒಪ್ಪಿದ ದರಕ್ಕಿಂತ ಭಾರತದಲ್ಲಿ ಹೆಚ್ಚಾಗಿದೆ. ಅಲ್ಲಿ ಸರ್ಕಾರಗಳು ವೆಚ್ಚವನ್ನು ಹೀರಿಕೊಳ್ಳುತ್ತವೆ. ಲಸಿಕೆಯನ್ನು ಉಚಿತವಾಗಿ ನೀಡುತ್ತಿವೆ. ಸೌದಿ ಅರೇಬಿಯಾ ಮತ್ತು ದಕ್ಷಿಣ ಆಫ್ರಿಕಾ ಲಸಿಕೆಯನ್ನು 5.25 ಡಾಲರ್​ಗೆ ಲಸಿಕೆ ಖರೀದಿಸುತ್ತಿದ್ದರೆ, ಅಮೆರಿಕ ಮತ್ತು ಬಾಂಗ್ಲಾದೇಶ ಇದನ್ನು 4 ಡಾಲರ್​ಗೆ, ಬ್ರೆಜಿಲ್ 3.15 ಡಾಲರ್​ಗೆ, ಇಂಗ್ಲೆಂಡ್​ 3 ಡಾಲರ್​ಗೆ ಮತ್ತು ಇಯು 2.15-3.50 ಡಾಲರ್​ಗೆ ಖರೀದಿಸುತ್ತಿವೆ ಎಂದಿದೆ.

ಕೇಂದ್ರವು 3,000 ಕೋಟಿ ರೂ. ಮುಂಚಿತವಾಗಿ ಪಾವತಿಸಿದೆ ಎಂದು ಪೂನವಾಲ್ಲಾ ಬುಧವಾರ ಹೇಳಿದ್ದಾರೆ. ಆ ಮೊತ್ತದ ಹೆಚ್ಚಿನ ಭಾಗವನ್ನು 110 ದಶಲಕ್ಷ ಡೋಸ್‌ಗಳ ಆರ್ಡರ್​ ಪೂರೈಸಲು ಬಳಸಲಾಗುತ್ತದೆ. ಪ್ರತಿ ಡೋಸ್‌ಗೆ 150 ರೂ.ಗಳಷ್ಟಿದೆ. ಯಾವುದೇ ಹೊಸ ಆರ್ಡರ್​ಗೆ ಪೂನವಾಲ್ಲಾ ಪ್ರಕಾರ ಸರ್ಕಾರ ಕೂಡ ಒಂದು ಡೋಸ್ 400 ರೂ., ಅಂದರೆ ಉಳಿದ 1,350 ಕೋಟಿ ರೂ.ಯಲ್ಲಿ ಸರ್ಕಾರಕ್ಕೆ ಕೇವಲ 35 ದಶಲಕ್ಷ ಡೋಸ್‌ ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತದೆ.

ABOUT THE AUTHOR

...view details