ಪುಣೆ:ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ರಾಜ್ಯಗಳಿಗೆ ಹಂಚಿಕೆ ಮಾಡುವ ಡೋಸ್ ದರ ತಗ್ಗಿಸುವುದಾಗಿ ಸಂಸ್ಥೆಯ ಸಿಇಒ ಆದರ್ ಪೂನವಾಲ್ಲಾ ತಿಳಿಸಿದ್ದಾರೆ.
ರಾಜ್ಯಗಳಿಗೆ ಪೂರೈಸುವ ಕೋವಿಶೀಲ್ಡ್ ಲಸಿಕೆ ದರ ಇಳಿಕೆ: ಸೀರಮ್ ಸಿಇಒ ಘೋಷಣೆ - ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
'ಎಸ್ಎಸ್ಐ ಕಂಪನಿಯು ರಾಜ್ಯಗಳಿಗೆ ಹಂಚಿಕೆ ಮಾಡುವ ಕೋವಿಶೀಲ್ಡ್ ಬೆಲೆಯಲ್ಲಿ 25 ಪ್ರತಿಶತ ತಗ್ಗಿಸಿ ಪ್ರತಿ ಡೋಸ್ಗೆ 300 ರೂ. ನಿಗದಿಪಡಿಸಿದೆ. ತಕ್ಷಣವೇ ಜಾರಿಗೆ ತರುವ ಲೋಕೋಪಕಾರಿ ನಿರ್ಧಾರ ತೆಗೆದುಕೊಂಡಿದೆ. ರಾಜ್ಯಗಳ ಹಣವನ್ನು ಉಳಿಸುವ ಹಿತದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ' ಎಂದು ಹೇಳಿದೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನೋಂದಾಯಿತರಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಇಂದಿನಿಂದಲೇ ನೋದಣಿ ಶುರುವಾಗಿದೆ. 'ಎಸ್ಎಸ್ಐ ಕಂಪನಿಯು ರಾಜ್ಯಗಳಿಗೆ ಹಂಚಿಕೆ ಮಾಡುವ ಕೋವಿಶೀಲ್ಡ್ ಬೆಲೆಯಲ್ಲಿ 25 ಪ್ರತಿಶತ ತಗ್ಗಿಸಿ ಪ್ರತಿ ಡೋಸ್ಗೆ 300 ರೂ. ನಿಗದಿಪಡಿಸಿದೆ. ತಕ್ಷಣವೇ ಜಾರಿಗೆ ತರುವ ಲೋಕೋಪಕಾರಿ ನಿರ್ಧಾರ ತೆಗೆದುಕೊಂಡಿದೆ. ರಾಜ್ಯಗಳ ಹಣವನ್ನು ಉಳಿಸುವ ಹಿತದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ' ಎಂದು ಹೇಳಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪರವಾಗಿ ಲೋಕೋಪಕಾರಿ ಸೂಚಕವಾಗಿ ನಾನು ಈ ಮೂಲಕ ರಾಜ್ಯಗಳಿಗೆ ಬೆಲೆಯನ್ನು 400 ರೂ.ನಿಂದ 300 ರೂ.ಗೆ ಇಳಿಸುತ್ತೇನೆ. ತಕ್ಷಣದಿಂದ ಜಾರಿಗೆ ಬರುತ್ತದೆ. ಇದು ರಾಜ್ಯಗಳಿಗೆ ಸಾವಿರಾರು ಕೋಟಿ ಹಣವನ್ನು ಉಳಿಸುತ್ತದೆ. ಇದು ಅವುಗಳ ಸಾಮರ್ಥ್ಯ ಶಕ್ತಗೊಳಿಸುತ್ತದೆ. ಹೆಚ್ಚಿನ ವ್ಯಾಕ್ಸಿನೇಷನ್ ಮತ್ತು ಅಸಂಖ್ಯಾತ ಜೀವಗಳನ್ನು ರಕ್ಷಿಸುತ್ತದೆ ಎಂದು ಪೂನವಾಲ್ಲಾ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.