ನವದೆಹಲಿ:ಮಹಾರಾಷ್ಟ್ರಕ್ಕೆ ಆಗಮಿಸುವ ಎಲ್ಲ ರೈಲ್ವೆ ಪ್ರಯಾಣಿಕರಿಗೆ ಈಗ ಕೋವಿಡ್ ಋಣಾತ್ಮಕ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯವಾಗಿದೆ.
ಬೋರ್ಡಿಂಗ್, ಪ್ರಯಾಣ ಮತ್ತು ಡಿ-ಬೋರ್ಡಿಂಗ್ ಮಾಡುವಾಗ ಕೋವಿಡ್-19 ಮಾರ್ಗದರ್ಶಿ ಅನುಸರಿಸಲು ಎಲ್ಲ ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಮನವಿ ಮಾಡಿದೆ.
ಯಾವುದೇ ಸಾರಿಗೆ ವಿಧಾನದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಪ್ರವೇಶಿಸುವ ಯಾವುದೇ ವ್ಯಕ್ತಿಯು ನೆಗೆಟಿವ್ ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷಾ ವರದಿ ತೆಗೆದುಕೊಳ್ಳಬೇಕಾಗುತ್ತದೆ. ಕೊರೊನಾ ವೈರಸ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಪ್ರಯಾಣಿಕರು ಮಹಾರಾಷ್ಟ್ರಕ್ಕೆ ಪ್ರವೇಶಿಸುವ ಸಮಯಕ್ಕೆ ಗರಿಷ್ಠ 48 ಗಂಟೆಗಳ ಮೊದಲು ನೀಡಬೇಕಾಗುತ್ತೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಇದನ್ನೂ ಓದಿ: ಮತ್ತೊಂದು ಸುತ್ತಿನ ಪ್ಯಾಕೇಜ್ಗೆ ಕೇಂದ್ರ ತಯಾರಿ ವರದಿಗೆ ಪೇಟೆಯಲ್ಲಿ ಗೂಳಿ ಕುಣಿತ!
ಗೋವಾ, ಕೇರಳ, ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ, ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ ಮತ್ತು ದೆಹಲಿ ರಾಜ್ಯಗಳಿಂದ ಬರುವ ಎಲ್ಲ ನಿರ್ಬಂಧಗಳನ್ನು ಆದೇಶದಂತೆ ಅನ್ವಯಿಸಲಾಗಿದೆ. ದೇಶದ ಯಾವುದೇ ಭಾಗದಿಂದ ರಾಜ್ಯಕ್ಕೆ ಬರುವ ಯಾರಿಗಾದರೂ ಈಗ ಅನ್ವಯವಾಗುತ್ತದೆ. ವಿವಿಧ ರಾಜ್ಯಗಳಿಗೆ ಇತ್ತೀಚಿನ ಕೋವಿಡ್ ಸಲಹೆಗಳು https://contents.irctc.co.in/en/stateWiseAd ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ದೂರದ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಧಿಕೃತ ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಕೋವಿಡ್ ಸಲಹೆಯನ್ನು ಪರಿಶೀಲಿಸಲು ಮತ್ತು ತಮ್ಮ ಸುರಕ್ಷತೆ ಮತ್ತು ಇತರರ ಸುರಕ್ಷತೆಗಾಗಿ COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸಲು ಕೋರಲಾಗಿದೆ ಎಂದು ಭಾರತೀಯ ರೈಲ್ವೆ ಸೂಚಿಸಿದೆ.
ರೈಲ್ವೆ ಸಚಿವಾಲಯವು ಹಲವು ಪ್ರಯಾಣಿಕ ವಿಶೇಷ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದೆ. ಕೋವಿಡ್-19 ಕಾರಣದಿಂದಾಗಿ ಎಲ್ಲಾ ಪ್ರಯಾಣಿಕರ ರೈಲು ಸೇವೆಗಳನ್ನು ಸರ್ಕಾರವು ಸ್ಥಗಿತಗೊಳಿಸಿದ್ದರಿಂದ ಕಳೆದ ವರ್ಷದಿಂದ ಹಲವು ವಿಶೇಷ ರೈಲು ಸೇವೆಗಳು ರೈಲ್ವೆ ಜಾಲದಲ್ಲಿ ಚಲಿಸುತ್ತಿವೆ. ಕೋವಿಡ್ ಕೇಸ್ಗಳ ಉಲ್ಬಣದಿಂದಾಗಿ, ಕೆಲವು ವಿಶೇಷ ರೈಲು ಸೇವೆಗಳು ಕಡಿಮೆ ಸಾಮರ್ಥ್ಯದೊಂದಿಗೆ ಚಲಿಸುತ್ತಿವೆ.