ನವದೆಹಲಿ:ಫ್ಲೈಯಿಂಗ್ ಸಿಬ್ಬಂದಿಗೆ 'ಪ್ಯಾನ್ ಇಂಡಿಯಾ' ಆಧಾರದ ಮೇಲೆ ಲಸಿಕೆ ಶಿಬಿರ ಸ್ಥಾಪಿಸಲು ವಿಮಾನಯಾನ ಸಂಸ್ಥೆ ವಿಫಲವಾದರೆ ತಮ್ಮ ಕೆಲಸ ನಿಲ್ಲಿಸುವುದಾಗಿ ಏರ್ ಇಂಡಿಯಾ ಪೈಲಟ್‌ಗಳ ಒಕ್ಕೂಟ(ಐಸಿಪಿಎ) ಬೆದರಿಕೆ ಹಾಕಿದೆ.
ವಿಮಾನ ಹಾರಾಟ ಸಿಬ್ಬಂದಿಗೆ ಯಾವುದೇ ಆರೋಗ್ಯ ಸೌಕರ್ಯಗಳಿಲ್ಲ. ವಿಮೆ ಇಲ್ಲ, ಮತ್ತು ಭಾರಿ ವೇತನ ಕಡಿತವಿದೆ. ವ್ಯಾಕ್ಸಿನೇಷನ್ ಇಲ್ಲದೆ ನಮ್ಮ ಪೈಲಟ್‌ಗಳ ಜೀವವನ್ನು ಅಪಾಯಕ್ಕೆ ತಳ್ಳುವ ಸ್ಥಿತಿ ಎದುರಾಗಿದೆ ಎಂದು ಏರ್ ಇಂಡಿಯಾದ ಕಾರ್ಯಾಚರಣೆಯ ನಿರ್ದೇಶಕ ಆರ್.ಎಸ್. ಸಂಧು ಹೇಳಿದ್ದಾರೆ.
ನಮ್ಮ ಹಣಕಾಸು ಈಗಾಗಲೇ ಹಾಸಿಗೆ ಹಿಡಿದ ಸಹೋದ್ಯೋಗಿಗಳು ಒಳಗೊಂಡಂತೆ ಕುಟುಂಬಸ್ಥರಿಗೆ ನೀಡಲು ಸಾಕಾಗುತ್ತಿಲ್ಲ. ನಮ್ಮ ಅಜಾಗರೂಕತೆಯಿಂದ ಮಾರಣಾಂತಿಕ ವೈರಸ್ ನಮ್ಮ ಕುಟುಂಬಸ್ಥರಿಗೆ ತಗುಲದಂತೆ ನಾವು ಸದಾ ಜಾಗೃತರಾಗಿರಬೇಕಿದೆ. ಆದ್ಯತೆಯ ಮೇರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ವಿಮಾನ ಹಾರಾಟ ಸಿಬ್ಬಂದಿಗೆ ಪ್ಯಾನ್ ಇಂಡಿಯಾ ಆಧಾರದ ಮೇಲೆ ವ್ಯಾಕ್ಸಿನೇಷನ್ ಕ್ಯಾಂಪ್‌ಗಳನ್ನು ಸ್ಥಾಪಿಸಲು ಏರ್ ಇಂಡಿಯಾ ವಿಫಲವಾದರೆ, ನಾವು ನಮ್ಮ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಅನೇಕ ಸಿಬ್ಬಂದಿ ಸದಸ್ಯರನ್ನು ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾಗಿದೆ. ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ.