ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎಂಜಿನಿಯರಿಂಗ್ ಮತ್ತು ನಿರ್ಮಾಣ ಸಂಘಟನೆಯ ಲಾರ್ಸೆನ್ ಆ್ಯಂಡ್ ಟೂಬ್ರೊ ಬೋರ್ಡ್ನ ಉನ್ನತ ಹಂತದ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ತಮ್ಮ ವೇತನದಲ್ಲಿ ಶೇ 53ರ ತನಕ ಕಡಿತ ಮಾಡಿಕೊಂಡಿದ್ದಾರೆ.
ವೇತನ ಕಡಿತದಲ್ಲಿ ಕಂಪನಿಯ ಗ್ರೂಪ್ ಚೇರ್ಮನ್ ಎ.ಎಂ.ನಾಯಕ್ ಅವರು 24.19 ಪ್ರತಿಶತದಷ್ಟಿದೆ ಎಂದು ಕಂಪನಿಯು ವಾರ್ಷಿಕ ವರದಿಯಲ್ಲಿ ತಿಳಿಸಿದೆ. ನಾಯಕ್ ಅವರು 2018-20ರಲ್ಲಿ 8.15 ಕೋಟಿ ರೂ. ಪಡೆದಿದ್ದರೆ, 2019-20ರಲ್ಲಿ 6.18 ಕೋಟಿ ರೂ. ಸ್ವೀಕರಿಸಲಿದ್ದಾರೆ. ಎಲ್ & ಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ/ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸುಬ್ರಹ್ಮಣ್ಯನ್ ಅವರು 2019-20ರಲ್ಲಿ 27.17 ಕೋಟಿ ರೂ. ವೇತನ ಹೊಂದಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ಹಬ್ಬುವಿಕೆಯಿಂದ ಉಂಟಾದ ಪರಿಣಾಮದಿಂದಾಗಿ ವ್ಯವಸ್ಥಾಪಕರ ಸಂಭಾವನೆ ಕಡಿತದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಸ್ವಯಂಪ್ರೇರಣೆಯಿಂದ ವೆಚ್ಚ ಕಡಿತ ಕ್ರಮಗಳಿಗೆ ಮೊರೆ ಹೋಗಿದ್ದಾರೆ. ಮತ್ತೊಂದೆಡೆ, 2019-20ನೇ ಸಾಲಿನ ವ್ಯವಸ್ಥಾಪಕ ಸಿಬ್ಬಂದಿ ಹೊರತುಪಡಿಸಿ ನೌಕರರ ವೇತನದಲ್ಲಿ ಸರಾಸರಿ ಶೇ 4.70ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವ್ಯವಹಾರದ ಮೇಲೆ ಕೋವಿಡ್-19ರ ಪ್ರಭಾವವನ್ನು ಪರಿಗಣಿಸಿ ಕಾರ್ಯನಿರ್ವಾಹಕ ನಿರ್ದೇಶಕರು ಅರ್ಹ ಆಯೋಗದ ಮೇಲೆ ಶೇ 50ರಷ್ಟು ಸ್ವಯಂಪ್ರೇರಿತವಾಗಿ ವೇತನ ಕಡಿತಗೊಳಿಸಿದ್ದಾರೆ ಎಂದು ಹೇಳಿದೆ.
ಪೂರ್ಣ ಪ್ರಮಾಣದ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಆರ್.ಶಂಕರ್ ರಾಮನ್ ಅವರು ಶೇ 47.33ರಷ್ಟು ವೇತನ ಕಡಿತಗೊಳಿಸಿಕೊಂಡು 13.20 ಕೋಟಿ ರೂ.ಗೆ ಸೀಮಿತಗೊಳಿಸಿದ್ದಾರೆ. ಅಜೀವ ನಿರ್ದೇಶಕ ಮತ್ತು ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶೈಲೇಂದ್ರ ರಾಯ್ ಅವರು ಶೇ 53.01ರಷ್ಟು ವೇತನ ಕಡಿತವಾಗಿ 6.63 ಕೋಟಿ ರೂ. ಪಡೆಯಲಿದ್ದಾರೆ.