ಕರ್ನಾಟಕ

karnataka

ETV Bharat / business

ಕೊರೊನಾ ಹೊಡೆತಕ್ಕೆ ಏರುಪೇರಾದ ಏರ್​ಲೈನ್ಸ್​.. ಇಂಡಿಗೊದ ಶೇ.10ರಷ್ಟು ನೌಕರರಿಗೆ ಗೇಟ್​ಪಾಸ್​!! - ಇಂಡಿಗೊ ಸಿಇಒ ರೊನೋಜಾಯ್ ದತ್ತಾ

ಸಾಧ್ಯವಿರುವ ಎಲ್ಲಾ ಪರಿಸ್ಥಿತಿಗಳನ್ನು ಎಚ್ಚರಿಕೆಯಿಂದ ನಿರ್ಣಯಿಸಿದ ಬಳಿಕ ಪರಿಶೀಲನೆಗೆ ಒಳಪಡಿಸಿ, ಶೇ.10ರಷ್ಟು ಉದ್ಯೋಗಿಗಳಿಗೆ ಕೊಕ್​ ನೀಡಬೇಕಿದೆ. ಇದೊಂದು ನೋವಿನ ನಿರ್ಧಾರ ಎಂದು ಸಂಸ್ಥೆಯ ಸಿಇಒ ರೊನೋಜಾಯ್ ದತ್ತಾ ಹೇಳಿದರು..

ಇಂಡಿಗೊ

By

Published : Jul 20, 2020, 8:51 PM IST

ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆಯು ಭಾರತದ ಅತಿದೊಡ್ಡ ವಿಮಾನಯಾನ ಇಂಡಿಗೊ, ತನ್ನ ಸಿಬ್ಬಂದಿಯ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ.

ವಿಮಾನಯಾನ ಕ್ಷೇತ್ರವು ಕೋವಿಡ್​-19ನಿಂದ ತೀವ್ರ ಹೊಡೆತಕ್ಕೊಳಗಾಗಿದೆ. ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ರದ್ದುಗೊಳಿಸಿವೆ ಮತ್ತು ನೌಕರರಿಗೆ ವೇತನ ಕಡಿತ ಘೋಷಿಸಿವೆ.

ಸಾಧ್ಯವಿರುವ ಎಲ್ಲಾ ಪರಿಸ್ಥಿತಿಗಳನ್ನು ಎಚ್ಚರಿಕೆಯಿಂದ ನಿರ್ಣಯಿಸಿದ ಬಳಿಕ ಪರಿಶೀಲನೆಗೆ ಒಳಪಡಿಸಿ, ಶೇ.10ರಷ್ಟು ಉದ್ಯೋಗಿಗಳಿಗೆ ಕೊಕ್​ ನೀಡಬೇಕಿದೆ. ಇದೊಂದು ನೋವಿನ ನಿರ್ಧಾರ ಎಂದು ಸಂಸ್ಥೆಯ ಸಿಇಒ ರೊನೋಜಾಯ್ ದತ್ತಾ ಹೇಳಿದರು.

ಕೇವಲ 6 ತಿಂಗಳ ಹಿಂದೆ ನಮ್ಮನ್ನು ನಾವು ರೂಪಿಸಿಕೊಂಡ ಆಶಾವಾದಿ ಬೆಳವಣಿಗೆಯ ಹಾದಿಯ ಒಂದು ದುರದೃಷ್ಟಕರ ತಿರುವು. ಆದರೆ, ಈ ಸಾಂಕ್ರಾಮಿಕವು ನಮ್ಮ ಅತ್ಯುತ್ತಮ ಯೋಜನೆಗಳನ್ನು ಮರುಮೌಲ್ಯಮಾಪನ ಮಾಡಲು ನೂಕುತ್ತಿದೆ ಎಂದರು.

ನಾವು ವೇತನ ಕಡಿತ, ವೇತನರಹಿತ ರಜೆ ಮತ್ತು ಇತರ ಹಲವು ವೆಚ್ಚ ನಿರ್ವಹಣೆಯಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ, ದುರದೃಷ್ಟವಶಾತ್ ಈ ವೆಚ್ಚ ಉಳಿತಾಯವು ಆದಾಯದ ಕುಸಿತವನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ದತ್ತಾ ಅವರು ಹೇಳಿದರು.

ABOUT THE AUTHOR

...view details