ನ್ಯೂಯಾರ್ಕ್:ಪಾನಿಯ ಕಂಪನಿ ಕೋಕಾ - ಕೋಲಾ ತನ್ನ ವ್ಯಾಪಾರ ಘಟಕ ಮತ್ತು ಬ್ರ್ಯಾಂಡ್ ವಿಭಜನೆಯ ಭಾಗವಾಗಿ 2,200 ಕಾರ್ಮಿಕರನ್ನು ಅಥವಾ ಜಾಗತಿಕ ಉದ್ಯೋಗಿಗಳ 17 ಪ್ರತಿಶತ ವಜಾಗೊಳಿಸುತ್ತಿದೆ ಎಂದು ಹೇಳಿದೆ.
ಅಟ್ಲಾಂಟಾ ಮೂಲದ ಕಂಪನಿಯು ಅಮೆರಿಕದಲ್ಲಿ ಅರ್ಧದಷ್ಟು ನೌಕರರನ್ನು ವಜಾಗೊಳಿಸುತ್ತಿದೆ. ಅಲ್ಲಿ, ಕೋಕ್ ಸುಮಾರು 10,400 ನೌಕರರನ್ನು ನೇಮಿಸಿಕೊಂಡಿದೆ. 2019ರ ಕೊನೆಯಲ್ಲಿ ವಿಶ್ವದಾದ್ಯಂತ 86,200 ಜನರಿಗೆ ಉದ್ಯೋಗ ನೀಡಿದೆ.
ಲಾಕ್‌ಡೌನ್‌ಗಳಿಂದಾಗಿ ಕ್ರೀಡಾಂಗಣ ಮತ್ತು ಚಿತ್ರಮಂದಿರಗಳು ಬಣಗುಟ್ಟುತ್ತಿವೆ. ಕೊರೊನಾ ವೈರಸ್ ಸಾಂಕ್ರಾಮಿಕವು ಕೋಕ್‌ನ ವ್ಯವಹಾರಕ್ಕೆ ದೊಡ್ಡ ಅಡ್ಡಿಯನ್ನುಂಟು ಮಾಡಿದೆ. ಜುಲೈ - ಸೆಪ್ಟೆಂಬರ್ ಅವಧಿಯಲ್ಲಿ ಆದಾಯವು ಶೇ 9ರಷ್ಟು ಇಳಿದು 8.7 ಶತಕೋಟಿ ಡಾಲರ್ಗೆ ತಲುಪಿದೆ.