ಕರ್ನಾಟಕ

karnataka

ETV Bharat / business

Netflixನಲ್ಲಿ ಮಲ್ಯ, ನೀರವ್​, ಚೋಕ್ಸಿ ವಂಚನೆ ಕಥೆ ಅನಾವರಣ

ಭಾರತೀಯ ನ್ಯಾಯಾಲಯಗಳಲ್ಲಿ ವಾರಗಳ ಕಾಲ ಕಾನೂನು ಹೋರಾಟದ ಬಳಿಕ ನೆಟ್‌ಫ್ಲಿಕ್ಸ್‌ ಪ್ರಸರಾದ ಹಕ್ಕನ್ನು ಗೆದ್ದುಕೊಂಡಿದೆ. ಈ ಸರಣಿಯು ಭಾರತದ ಅತ್ಯಂತ ಕುಖ್ಯಾತ ಉದ್ಯಮಿಗಳ ದುರಾಸೆ, ವಂಚನೆ ಮತ್ತು ಭ್ರಷ್ಟಾಚಾರವನ್ನು ಪರಿಶೋಧಿಸುತ್ತದೆ ಎಂದು ನೆಟ್‌ಫ್ಲಿಕ್ಸ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ..

Bad Boy Billionaires
ಬ್ಯಾಡ್‌ ಬಾಯ್‌ ಬಿಲಿಯನೇರ್ಸ್

By

Published : Oct 7, 2020, 4:58 PM IST

ಮುಂಬೈ :ನೆಟ್‌ಫ್ಲಿಕ್ಸ್‌ ಇಂಕ್​ನ 'ಬ್ಯಾಡ್‌ ಬಾಯ್ಸ್‌ ಬಿಲಿಯನೇರ್ಸ್‌' ವೆಬ್ ಸರಣಿ ಪ್ರಸಾರಕ್ಕೆ ಮುಂಬೈನ ನ್ಯಾಯಾಲಯ ಹಸಿರು ನಿಶಾನೆ ತೋರಿದೆ. ಕಾನೂನಿನ ತೊಂದರೆಗೆ ಸಿಲುಕಿರುವ ಭಾರತೀಯ ಉದ್ಯಮಿಗಳ ಕುರಿತು 'ಬ್ಯಾಡ್ ಬಾಯ್ ಬಿಲಿಯನೇರ್ಸ್: ಇಂಡಿಯಾ' ವೆಬ್ ಸರಣಿಯ ಸಾಕ್ಷ್ಯ ಚಿತ್ರವನ್ನು ತಯಾರಿಸಿತು. ವೆಬ್​ ಸರಣಿ ಪ್ರಸಾರ ಮಾಡದಂತೆ ಸಂಬಂಧಿತ ಉದ್ಯಮಿಗಳು ಕೋರ್ಟ್​ನಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು.

ಮುಂಬೈನ ನ್ಯಾಯಾಲಯವು ಅಮೆರಿಕನ್ ಸ್ಟ್ರೀಮಿಂಗ್ ದೈತ್ಯ ನೆಟ್​ಫ್ಲಿಕ್ಸ್​ಗೆ 'ಬ್ಯಾಡ್ ಬಾಯ್ ಬಿಲಿಯನೇರ್ಸ್: ಇಂಡಿಯಾ' ವೆಬ್ ಸರಣಿಯ ಹೆಚ್ಚಿನ ಭಾಗಗಳನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ಸರಣಿಯಲ್ಲಿ ಮದ್ಯದ ಉದ್ಯಮಿ ವಿಜಯ್ ಮಲ್ಯ, ವಜ್ರೋದ್ಯಮಿ ನೀರವ್ ಮೋದಿ ಮತ್ತು ಸಂಸ್ಥಾಪಕ ಮಾಲೀಕ ಸುಬ್ರತಾ ರಾಯ್, ಸಹಾರಾ ಇಂಡಿಯಾ ಪರಿವಾರ್, ಸಾಫ್ಟ್‌ವೇರ್ ಉದ್ಯಮಿಗಳ ಕಥೆಗಳನ್ನು ಒಳಗೊಂಡಿದೆ.

ಭಾರತೀಯ ನ್ಯಾಯಾಲಯಗಳಲ್ಲಿ ವಾರಗಳ ಕಾಲ ಕಾನೂನು ಹೋರಾಟದ ಬಳಿಕ ನೆಟ್‌ಫ್ಲಿಕ್ಸ್‌ ಪ್ರಸರಾದ ಹಕ್ಕನ್ನು ಗೆದ್ದುಕೊಂಡಿದೆ. ಈ ಸರಣಿಯು ಭಾರತದ ಅತ್ಯಂತ ಕುಖ್ಯಾತ ಉದ್ಯಮಿಗಳ ದುರಾಸೆ, ವಂಚನೆ ಮತ್ತು ಭ್ರಷ್ಟಾಚಾರವನ್ನು ಪರಿಶೋಧಿಸುತ್ತದೆ ಎಂದು ನೆಟ್‌ಫ್ಲಿಕ್ಸ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಸರಣಿಯ ನಾಲ್ಕನೇ ಕಂತು ಸತ್ಯಂ ಕಂಪ್ಯೂಟರ್ಸ್​​ ಹಗರಣದಲ್ಲಿ ಶಿಕ್ಷೆಗೊಳಗಾದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಸಂಸ್ಥಾಪಕ ಬಿ. ರಾಮಲಿಂಗ ರಾಜು ಅವರ ಜೀವನ ಕಥೆ ಒಳಗೊಂಡಿದೆ. ನೆಟ್‌ಫ್ಲಿಕ್ಸ್ ಈ ಬಗ್ಗೆ ಹೈದರಾಬಾದ್​ ನ್ಯಾಯಾಲಯದಲ್ಲಿ ಕಾನೂನು ಸವಾಲು ಎದುರಿಸುತ್ತಿದೆ.

ABOUT THE AUTHOR

...view details