ನವದೆಹಲಿ: ಜಾಗತಿಕ ಸೋಷಿಯಲ್ ಮೀಡಿಯಾ ದೈತ್ಯ ಇಂಡಿಯಾ ಘಟಕವು ಆಡಳಿತಾರೂ ಬಿಜೆಪಿಯ ಬಗ್ಗೆ ಪಕ್ಷಪಾತ ತೋರುತ್ತಿದೆ ಎಂದು ಪದೇ ಪದೆ ಆರೋಪಿಸುತ್ತಿರುವ ಕಾಂಗ್ರೆಸ್ ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ಒಂದು ತಿಂಗಳಲ್ಲಿ ಎರಡನೇ ಬಾರಿ ಪತ್ರ ಬರೆದಿದೆ.
ಫೇಸ್‌ಬುಕ್ ಉದ್ಯೋಗಿಗಳ ಸಂಪರ್ಕ ಮತ್ತು ಆಡಳಿತ ವ್ಯವಸ್ಥೆಯ ಜತೆಗಿದೆ ಎನ್ನಲಾದ ನಂಟಿನ ಕುರಿತು ಸಂಸದೀಯ ಸಮಿತಿಯ ಮುಖಾಂತರ ತನಿಖೆ ನಡೆಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಒತ್ತಾಯಿಸಿದೆ.
ಝುಕರ್‌ಬರ್ಗ್‌ಗೆ ಕಾಂಗ್ರೆಸ್ ಬರೆದ ಪತ್ರವು ಟೈಮ್ ನಿಯತಕಾಲಿಕೆಯ ಲೇಖನವೊಂದರಲ್ಲಿ ಬಂದಿದ್ದು, ಬಿಜೆಪಿಯೊಂದಿಗೆ ಫೇಸ್‌ಬುಕ್ ಇಂಡಿಯಾದ ಪಕ್ಷಪಾತದ ಪುರಾವೆಗಳನ್ನು ವಿರೋಧ ಪಕ್ಷವು ಬಹಿರಂಗಪಡಿಸಿದೆ. ಇದು ವ್ಯಾಪಕ ಮಟ್ಟದ ಚರ್ಚೆ ಹುಟ್ಟುಹಾಕಿದೆ ಎಂದು ಉಲ್ಲೇಖಿಸಿದೆ.
ಈ ಆರೋಪದ ಬಗ್ಗೆ ಫೇಸ್‌ಬುಕ್ ಅಥವಾ ಬಿಜೆಪಿಯಿಂದ ತಕ್ಷಣ ಪ್ರತಿಕ್ರಿಯೆ ಬಂದಿಲ್ಲ. ಈ ತಿಂಗಳ ಆರಂಭದಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿನ ವರದಿಯು ಇದೇ ರೀತಿಯ ಆರೋಪಗಳನ್ನು ಮುನ್ನೆಲೆಗೆ ತಂದಿತ್ತು. ಇದನ್ನು ಫೇಸ್‌ಬುಕ್ ಮತ್ತು ಬಿಜೆಪಿ ಬಲವಾಗಿ ತಿರಸ್ಕರಿಸಿದ್ದವು. ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಸಹ ಫೇಸ್‌ಬುಕ್‌ನ ಒಡೆತನದಲ್ಲಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ/ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಫೇಸ್‌ಬುಕ್ ಸಿಇಒ ಝುಕರ್‌ಬರ್ಗ್‌ಗೆ ಪತ್ರ ಬರೆದಿದ್ದು, ಆಗಸ್ಟ್ 17ರಂದು ಬರೆದಿದ್ದ ಹಿಂದಿನ ಪತ್ರದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಲೇಖನದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ನಿರಾಕರಿಸಿದೆ ಎಂದು ಆರೋಪಿಸಿರುವ ಬಗ್ಗೆ ಮನವಿ ಮಾಡಿದ್ದಾರೆ.
ಫೇಸ್‌ಬುಕ್ ಸಮೂಹ ಇತ್ತೇಚೆಗೆ ತೆಗೆದುಕೊಂಡ ವಿವರಗಳು ನೀಡುವಂತೆ ವೇಣುಗೋಪಾಲ್ ಅವರು ಆಗಸ್ಟ್ 29ರಂದು ಬರೆದ ಪತ್ರದಲ್ಲಿ ಕೋರಿದ್ದಾರೆ.