ಕರ್ನಾಟಕ

karnataka

By

Published : Feb 10, 2020, 10:28 PM IST

ETV Bharat / business

ಕಾಗ್ನಿಜೆಂಟ್​ನಿಂದ 20,000 ಎಂಜಿನಿಯರ್​​ ನೇಮಕ.. ₹4 ಲಕ್ಷ ವೇತನ, ಆಯ್ಕೆಯಾಗಲು ಇಷ್ಟು ಮಾಡಿ..

ಕಾಗ್ನಿಜಂಟ್ ತನ್ನ ಸಾಂಸ್ಥಿಕ ರಚನೆಯನ್ನು ಸರಳಗೊಳಿಸಿ ವೆಚ್ಚವನ್ನು ತಗ್ಗಿಸುವ ಭಾಗವಾಗಿ 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕವಾಗಿ 10,000ರಿಂದ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಈ ಬಳಿಕ ನೇಮಕಾತಿ ಪ್ರಕ್ರಿಯೆಯು ಭಾರತದಲ್ಲಿ ಹೆಚ್ಚಳವಾಗಿದೆ.

Cognizant Technology Solutions Corp
ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಾರ್ಪ್

ಬೆಂಗಳೂರು:ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪನಿಯಾದ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಾರ್ಪ್, ಈ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಪದವೀಧರರನ್ನು ನೇಮಿಸಿಕೊಳ್ಳಲಿದೆ.

ಭಾರತೀಯ ವಿದ್ಯಾರ್ಥಿಗಳು ಅತ್ಯಾಧುನಿಕ ಕೌಶಲ್ಯದ ಡಿಜಿಟಲ್​ ಶಿಕ್ಷಣ ಪಡೆಯುತ್ತಿದ್ದಾರೆ. ವಿವಿಧ ವಿಶ್ವವಿದ್ಯಾನಿಲಯದ ನಾನಾ ವಿದ್ಯಾರ್ಥಿಗಳು ಡಿಜಿಟಲ್ ರೂಪದಲ್ಲಿ ತಯಾರಾಗುತ್ತಿದ್ದಾರೆ. 2020ಕ್ಕೆ ನಮ್ಮ ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರ ನೇಮಕಾತಿಯನ್ನು ಶೇ. 30ರಷ್ಟು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಭಾರತದ ಶೈಕ್ಷಣಿಕ ಕ್ಯಾಂಪಸ್‌ಗಳಿಂದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ನಾವು ಯೋಜಿಸಿದ್ದೇವೆ ಎಂದು ಕಾಗ್ನಿಜಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ಹೇಳಿದರು.

ಐಟಿ ಮೇಜರ್ ಎಂಜಿನಿಯರಿಂಗ್ ಪದವೀಧರರಿಗೆ ಕ್ಯಾಂಪಸ್ ವೇತನವನ್ನು ಶೇ.18ರಷ್ಟು ಹೆಚ್ಚಿಸಿ ವರ್ಷಕ್ಕೆ 4 ಲಕ್ಷ ರೂ.ನಷ್ಟು ವೇತನ ನೀಡಲಿದ್ದೇವೆ. ಆಯ್ಕೆ ಮಾಡಿಕೊಂಡ ಸುಮಾರು 100 ಎಂಜಿನಿಯರಿಂಗ್ ಕ್ಯಾಂಪಸ್‌ಗಳಿಂದ ಶೇ. 80ಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಕಾಗ್ನಿಜಂಟ್ ತನ್ನ ಸಾಂಸ್ಥಿಕ ರಚನೆಯನ್ನು ಸರಳಗೊಳಿಸಿ ವೆಚ್ಚ ತಗ್ಗಿಸುವ ಭಾಗವಾಗಿ 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕ 10,000ರಿಂದ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಈ ಬಳಿಕ ನೇಮಕಾತಿ ಪ್ರಕ್ರಿಯೆಯು ಭಾರತದಲ್ಲಿ ಹೆಚ್ಚಳವಾಗಿದೆ.

ಕಳೆದ ವರ್ಷ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಭಾರತದಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಂಡ 2ನೇ ಐಟಿ ಕಂಪನಿಯಾಗಿದೆ. ಟಿಸಿಎಸ್ ಭಾರತದ ಅತಿದೊಡ್ಡ ಐಟಿ ವಲಯದ ಉದ್ಯೋಗದಾತರಾಗಿದ್ದು, ಒಟ್ಟು ಸುಮಾರು 4.4 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ಡಿಜಿಟಲ್ ಪರಿಹಾರಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ವಿಶಾಲ, ಭದ್ರವಾದ ಸ್ಥಾನ ಪಡೆದುಕೊಂಡಿದ್ದೇವೆ. ಹಣಕಾಸು, ವಿಮೆ, ಚಿಲ್ಲರೆ ವ್ಯಾಪಾರ, ಜೀವ ವಿಜ್ಞಾನ, ಉತ್ಪಾದನೆ ಮತ್ತು ಶಿಕ್ಷಣದಂತಹ ಉದ್ಯಮ ಕ್ಷೇತ್ರಗಳಲ್ಲಿ ಕೊನೆಯ ಹಂತದವರೆಗೂ ನಮ್ಮ ಐಟಿ ಸೇವೆ ಚಾಚಿಕೊಂಡಿದೆ. ಈ ಎಲ್ಲ ವಲಯಗಳಲ್ಲಿ ಪ್ರಸ್ತುತ ಸುಮಾರು 80ರಷ್ಟು ಗ್ರಾಹಕರನ್ನು ಹೊಂದಿದ್ದೇವೆ ಎಂದು ಹಂಫ್ರೈಸ್ ಹೇಳಿದರು.

ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪನಿಯಾದ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಾರ್ಪ್, ಈ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಪದವೀಧರರನ್ನು ನೇಮಿಸಿಕೊಳ್ಳಲಿದೆ.ಭಾರತೀಯ ವಿದ್ಯಾರ್ಥಿಗಳು ಅತ್ಯಾಧುನಿಕ ಕೌಶಲ್ಯದ ಡಿಜಿಟಲ್​ ಶಿಕ್ಷಣ ಪಡೆಯುತ್ತಿದ್ದಾರೆ. ವಿವಿಧ ವಿಶ್ವವಿದ್ಯಾನಿಲಯದ ನಾನಾ ವಿದ್ಯಾರ್ಥಿಗಳು ಡಿಜಿಟಲ್ ರೂಪದಲ್ಲಿ ತಯಾರಾಗುತ್ತಿದ್ದಾರೆ. 2020ಕ್ಕೆ ನಮ್ಮ ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರ ನೇಮಕಾತಿಯನ್ನು ಶೇ 30ರಷ್ಟು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಭಾರತದ ಶೈಕ್ಷಣಿಕ ಕ್ಯಾಂಪಸ್‌ಗಳಿಂದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ನಾವು ಯೋಜಿಸಿದ್ದೇವೆ ಎಂದು ಕಾಗ್ನಿಜಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ಹೇಳಿದರು.

ಐಟಿ ಮೇಜರ್ ಎಂಜಿನಿಯರಿಂಗ್ ಪದವೀಧರರಿಗೆ ಕ್ಯಾಂಪಸ್ ವೇತನವನ್ನು 18ರಷ್ಟು ಹೆಚ್ಚಿಸಿ ವರ್ಷಕ್ಕೆ 4 ಲಕ್ಷ ರೂ.ಯಷ್ಟು ವೇತನ ನೀಡಲಿದ್ದೇವೆ. ಆಯ್ಕೆ ಮಾಡಿಕೊಂಡ ಸುಮಾರು 100 ಎಂಜಿನಿಯರಿಂಗ್ ಕ್ಯಾಂಪಸ್‌ಗಳಿಂದ ಶೇ 80ಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಕಾಗ್ನಿಜಂಟ್ ತನ್ನ ಸಾಂಸ್ಥಿಕ ರಚನೆಯನ್ನು ಸರಳಗೊಳಿಸಿ ವೆಚ್ಚವನ್ನು ತಗ್ಗಿಸುವ ಭಾಗವಾಗಿ 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕವಾಗಿ 10,000ರಿಂದ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಈ ಬಳಿಕ ನೇಮಕಾತಿ ಪ್ರಕ್ರಿಯೆಯು ಭಾರತದಲ್ಲಿ ಹೆಚ್ಚಳವಾಗಿದೆ.

ಕಳೆದ ವರ್ಷ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಭಾರತದಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಂಡ ಎರಡನೇ ಐಟಿ ಕಂಪನಿಯಾಗಿದೆ. ಟಿಸಿಎಸ್ ಭಾರತದ ಅತಿದೊಡ್ಡ ಐಟಿ ವಲಯದ ಉದ್ಯೋಗದಾತರಾಗಿದ್ದು, ಒಟ್ಟು ಸುಮಾರು 4.4 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ಡಿಜಿಟಲ್ ಪರಿಹಾರಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ವಿಶಾಲವಾದ ಭದ್ರವಾದ ಸ್ಥಾನ ಪಡೆದುಕೊಂಡಿದ್ದೇವೆ. ಹಣಕಾಸು, ವಿಮೆ, ಚಿಲ್ಲರೆ ವ್ಯಾಪಾರ, ಜೀವ ವಿಜ್ಞಾನ, ಉತ್ಪಾದನೆ ಮತ್ತು ಶಿಕ್ಷಣದಂತಹ ಉದ್ಯಮ ಕ್ಷೇತ್ರಗಳಲ್ಲಿ ಕೊನೆಯ ಹಂತದವರೆಗೂ ನಮ್ಮ ಐಟಿ ಸೇವೆ ಚಾಚಿಕೊಂಡಿದೆ. ಈ ಎಲ್ಲ ವಲಯಗಳಲ್ಲಿ ಪ್ರಸ್ತುತ, ಸುಮಾರು 80ರಷ್ಟು ಗ್ರಾಹಕರನ್ನು ಹೊಂದಿದ್ದೇವೆ ಎಂದು ಹಂಫ್ರೈಸ್ ಹೇಳಿದರು.

ABOUT THE AUTHOR

...view details