ಬೆಂಗಳೂರು:ದುರಂತವಾಗಿ ಅಂತ್ಯಕಂಡ ಕೆಫೆ ಕಾಫಿ ಡೇ ಎಂಟರ್ಪ್ರೈಸೆಸ್ನ ಸಂಸ್ಥಾಪಕ/ ಮಾಲೀಕ ವಿ.ಜಿ. ಸಿದ್ಧಾರ್ಥ್ ಅವರ ಬಳಿಕ ಪೂರ್ಣ ಪ್ರಮಾಣದ ಅಧ್ಯಕ್ಷರ ನೇಮಕಕ್ಕೆ ಸಿಸಿಡಿ ಮಂಡಳಿ ನಿರ್ಧರಿಸಿದೆ.
ವಿ.ಜಿ. ಸಿದ್ಧಾರ್ಥ್ ಪತ್ನಿಗೆ 'ಕೆಫೆ ಕಾಪಿ ಡೇ'ನ ಕಾರ್ಯನಿರ್ವಾಹಕ ಅಧ್ಯಕ್ಷೆ ಪಟ್ಟ ಸಾಧ್ಯತೆ..! - V G Siddharth
ಕೆಫೆ ಕಾಫಿ ಡೇ ಗ್ರೂಪ್ಗೆ ಶೀಘ್ರದಲ್ಲಿ ಇಬ್ಬರು ಸ್ವತಂತ್ರ ನಿರ್ದೇಶಕರನ್ನು ನೇಮಿಸಿಕೊಳ್ಳುವ ಚಿಂತನೆಯಲ್ಲಿ ಮಂಡಳಿ ಇದ್ದು, ಇದರಲ್ಲಿ ದಿ. ವಿ.ಜಿ. ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಸಿದ್ಧಾರ್ಥ್ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಿದ್ಧಾರ್ಥ್ ಅವರ ಮರಣದ ನಂತರ ಪೂರ್ಣಪ್ರಮಾಣದ ಅಧ್ಯಕ್ಷರ ನೇಮಕ ಮೂಲಕ ಕಂಪನಿಯ ಕಾರ್ಯಾಚರಣೆಯನ್ನು ಮುಂದುವರೆಸುವ ಇಂಗಿತವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.