ನವದೆಹಲಿ: ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ (ಸಿಸಿಡಿ) 2019ರ ಹಣಕಾಸು ವರ್ಷದ ತನ್ನ ವಾರ್ಷಿಕ ವರದಿ ಪ್ರಕಟಿಸಿದ್ದು, ₹ 4,970 ಕೋಟಿ ಮೊತ್ತದ ಸಾಲ ಹೊಂದಿದೆ. ಈ ಎಲ್ಲ ಸಾಲದ ಹಣ ತೀರಿಸುವ ಸಾಮರ್ಥ್ಯವಿದೆ ಎಂದು ಹೇಳಿದೆ.
ಆ ಒಂದು ನಿರ್ಧಾರದಿಂದ ಕಾಫಿ ಡೇ ಸಾಲ ₹ 2,400 ಕೋಟಿಗೆ ಇಳಿಯಲಿದೆ! - ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್
ಗ್ಲೋಬಲ್ ಟೆಕ್ ಮಾರಾಟದಿಂದ ₹ 2,600 ರಿಂದ ₹ 3,000 ಕೋಟಿಯಷ್ಟು ಮೊತ್ತ ಸಿಸಿಡಿ(ಕೆಫೆ ಕಾಫಿ ಡೇ) ಗೆ ದೊರೆಯಲಿದೆ. ಇದರಿಂದ ಗ್ರೂಪ್ ಮೇಲಿನ ಸಾಲದ ಹೊರೆ ₹ 2,570 ಕೋಟಿಯಷ್ಟು ತಗ್ಗಲಿದೆ. ಮಾರಾಟದ ಬಳಿಕ ಸಾಲ ಮರು ಪಾವತಿಸುವ ಪ್ರಕ್ರಿಯೆ ಯಥಾವತ್ತಾಗಿ ಸಾಗಲಿದೆ. 45 ದಿನಗಳ ಬಳಿಕ ಮರು ಪಾವತಿಸಬೇಕಾದ ಸಾಲದ ಮೊತ್ತ ಅಂದಾಜು ₹ 1,000 ಕೋಟಿಗೆ ತಲುಪಲಿದೆ ಎಂದು ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ಅಂದಾಜಿಸಿದೆ.
ಕಂಪನಿಗೆ ₹ 4,796 ಕೋಟಿ ಭದ್ರತಾ ಸಾಲ ಹಾಗೂ ₹ 174 ಕೋಟಿ ಭದ್ರತಾ ರಹಿತ ಸಾಲ ಸೇರಿ ಒಟ್ಟು ₹ 4,970 ಕೋಟಿಯಷ್ಟಿದೆ. ಈಗಾಗಲೇ ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ನಿಂದ ಹೂಡಿಕೆ(Disinvestment) ಹಿಂತೆಗೆದುಕೊಳ್ಳಲಾಗಿದೆ.
ಗ್ಲೋಬಲ್ ಟೆಕ್ ಮಾರಾಟದಿಂದ ₹ 2,600ರಿಂದ ₹ 3,000 ಕೋಟಿಯಷ್ಟು ಮೊತ್ತ ಸಿಸಿಡಿಗೆ ದೊರೆಯಲಿದೆ. ಇದರಿಂದ ಗ್ರೂಪ್ ಮೇಲಿನ ಸಾಲದ ಹೊರೆ ₹ 2,570 ಕೋಟಿಯಷ್ಟು ಕಡಿಮೆ ಆಗಲಿದೆ. ಮಾರಾಟದ ಬಳಿಕ ಸಾಲ ಮರು ಪಾವತಿಸುವ ಪ್ರಕ್ರಿಯೆ ಯಥಾವತ್ತಾಗಿ ಸಾಗಲಿದೆ. 45 ದಿನಗಳ ಬಳಿಕ ಮರು ಪಾವತಿಸಬೇಕಾದ ಸಾಲದ ಮೊತ್ತ ಅಂದಾಜು ₹ 1,000 ಕೋಟಿಗೆ ತಲುಪಲಿದೆ ಎಂದು ಕಂಪನಿ ಅಂದಾಜಿಸಿದೆ.