ಕರ್ನಾಟಕ

karnataka

ETV Bharat / business

ಕೋಲ್​ ಇಂಡಿಯಾದಿಂದ 100 ಕೋಟಿ ಟನ್​ ಕಲ್ಲಿದ್ದಲು ಉತ್ಪಾದನೆ ಗುರಿ:  10,000 ಉದ್ಯೋಗ ಸೃಷ್ಟಿ ಸಾಧ್ಯತೆ! - ಪ್ರಲ್ಹಾದ್​​ ಜೋಶಿ

ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ವಾರ್ಷಿಕ 100 ಕೋಟಿ ಟನ್​ ಕಲ್ಲಿದ್ದಲು ಉತ್ಪಾದಿಸುವ ಗುರಿ ಇರಿಸಿಕೊಂಡಿದೆ. ನೂತನ ತಂತ್ರಜ್ಞಾನ ಅಳವಡಿಕೆಯ ಜೊತೆಗೆ ಅಗತ್ಯವಾದ ಸುಮಾರು 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಕೆಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್​​ ಜೋಶಿ ಭರವಸೆ ನೀಡಿದ್ದಾರೆ.

ಕಲ್ಲಿದ್ದಲು

By

Published : Nov 2, 2019, 8:42 AM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿಯಾದ ಕೋಲ್​ ಇಂಡಿಯಾ, ವಾರ್ಷಿಕ 100 ಕೋಟಿ ಕಲ್ಲಿದ್ದಲು ಉತ್ಪಾದನೆ ಗುರಿ ಇರಿಸಿಕೊಂಡಿದೆ. ಇದಕ್ಕಾಗಿ 10,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಇರಾದೆ ಹೊಂದಿದೆ.

ಕೋಲ್​ ಇಂಡಿಯಾದ 45ನೇ ಸಂಸ್ಥಾಪನಾ ದಿನಾಚರಣೆಯಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್​​ ಜೋಶಿ ಮಾತನಾಡಿ, 2023-24ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಕೋಲ್ ಇಂಡಿಯಾ 1 ಬಿಲಿಯನ್ ಟನ್ (100 ಕೋಟಿ) ಕಲ್ಲಿದ್ದಲು ಉತ್ಪಾದಿಸಲಿದೆ. ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿ 2020-21ರ ವೇಳೆಗೆ 750 ದಶಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದಿಸಲಿದೆ ಎಂದು ಕೋಲ್​ ಇಂಡಿಯಾದ ಗುರಿ ಬಿಚ್ಚಿಟ್ಟರು.

ಉತ್ಪಾದನಾ ಗುರಿಯ ಹೆಚ್ಚಳದ ಜತೆಗೆ ಕೋಲ್ ಇಂಡಿಯಾ ಸುಮಾರು 10,000 ಹೊಸ ಉದ್ಯೋಗಗಳನ್ನು ನೇಮಿಸಿಕೊಳ್ಳಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಇಂಧನದ ಅವಶ್ಯಕತೆಗಳ ಬೇಡಿಕೆಯ ಗುರಿ ಸಾಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜೋಶಿ ಕಂಪನಿಗೆ ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯದಿಂದ ಸಾಧ್ಯವಿರುವ ಎಲ್ಲ ಸಹಾಯದ ಭರವಸೆಯನ್ನು ನೀಡಿದ್ದಾರೆ.

ಕೋಲ್ ಇಂಡಿಯಾ ತನ್ನ ಯೋಜನೆಗಳ ಮತ್ತು ವಿಸ್ತರಣೆ ಕಾರ್ಯಕ್ರಮಗಳಿಗಾಗಿ ಬೃಹತ್ ಬಂಡವಾಳ ಹೂಡಿಕೆಗೆ ಯೋಜಿಸಿದೆ. ಅದರ ದೈನಂದಿನ ಕಾರ್ಯಾಚರಣೆಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಿದೆ. ಕಂಪನಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದೆ ಮತ್ತು ನಿಗದಿತ ಅವಧಿಯಲ್ಲಿ ಎಲ್ಲ ಗುರಿಗಳನ್ನು ಮುಟ್ಟಲಿದೆ ಎಂದು ಭಾವಿಸುತ್ತೇನೆ ಎಂದು ಜೋಶಿ ಹೇಳಿದರು.

ABOUT THE AUTHOR

...view details