ನವದೆಹಲಿ :ಪ್ರಸಕ್ತ ಆರ್ಥಿಕ ವರ್ಷದ ಒಂಬತ್ತು ತಿಂಗಳಲ್ಲಿ ಒಟ್ಟಾರೆ ಖರ್ಚು ಶೇ.3.3ರಷ್ಟು ಇಳಿದು 54,241 ಕೋಟಿ ರೂ.ಯಷ್ಟಾಗಿದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಹೇಳಿದೆ.
ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಂಯೋಜಿತ ಮುಕ್ತ ಉತ್ಪಾದನೆಯು ಶೇ.16.1ರಷ್ಟು ಹೆಚ್ಚಾಗಿದೆ. ಸಿಐಎಲ್‌ನ ಒಟ್ಟಾರೆ ಖರ್ಚು 54,241 ಕೋಟಿ ರೂ.ಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 56,079 ಕೋಟಿ ರೂ.ಯಷ್ಟಿತ್ತು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
2020ರ ಡಿಸೆಂಬರ್ ಅಂತ್ಯದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ಶೇ.6.3ರಷ್ಟು ಉತ್ಪಾದನಾ ಬೆಳವಣಿಗೆ ಕಲ್ಲಿದ್ದಲು ಆಫ್ ಟೇಕ್‌ನಲ್ಲಿ ಶೇ.9.1ರಷ್ಟು ಮತ್ತು ಓವರ್ ಬರ್ಡನ್ ರಿಮೂವಲ್ನಲ್ಲಿ (ಒಬಿಆರ್) ಶೇ.17.3ರಷ್ಟು ಹೆಚ್ಚಳವಾಗಿದೆ ಎಂದಿದೆ.
ಖರ್ಚಿನ ದೃಷ್ಟಿಯಿಂದ ನೌಕರರ ಲಾಭದ ವೆಚ್ಚ 735 ಕೋಟಿ ರೂ.ಯಷ್ಟಿದೆ. ಇವುಗಳಲ್ಲಿ ಸಂಬಳ, ಕಾರ್ಯನಿರ್ವಾಹಕರ ಕಾರ್ಯಕ್ಷಮತೆ ಸಂಬಂಧಿತ ವೇತನ, ಕಲ್ಲಿದ್ದಲು ಗಣಿಗಳ ಭವಿಷ್ಯ ನಿಧಿ ಕೊಡುಗೆಗಳು ಸೇರಿವೆ.
ಇದನ್ನೂ ಓದಿ: ಖಾಸಗಿ ಉದ್ಯೋಗಿಗಳಿಗೆ ಸಿಹಿ ಸುದ್ದಿ: 2021ರಲ್ಲಿ ನಿಮ್ಮ ವೇತನ ಹೆಚ್ಚಳ!
ಇತ್ತೀಚಿನ ವರ್ಷಗಳಲ್ಲಿ ಸಿಐಎಲ್ ವಾರ್ಷಿಕವಾಗಿ ಸುಮಾರು 13,000 ಉದ್ಯೋಗಿಗಳ ಮೇಲ್ವಿಚಾರಣೆ ಹೊಂದಿದೆ. ನಾಲ್ಕು ವರ್ಷಗಳ ಹಿಂದೆ 3.22 ಲಕ್ಷ ಉದ್ಯೋಗಿಗಳಿಗೆ ಹೋಲಿಸಿದರೆ ಕಂಪನಿಯ ಮಾನವಶಕ್ತಿ ಪ್ರಸಕ್ತ ಹಣಕಾಸು ಆರಂಭದಲ್ಲಿ 2.72 ಲಕ್ಷಯಷ್ಟಿದೆ.
ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳ ಅವಧಿಯಲ್ಲಿ ಮಾನವಶಕ್ತಿ 13,800 ಕಡಿಮೆಯಾಗಿದೆ. ಈ ಕಡಿತವು ಇನ್ನೂ ಕೆಲವು ವರ್ಷಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಇದು ನೌಕರರ ಲಾಭದ ವೆಚ್ಚ ಮತ್ತಷ್ಟು ಕುಗ್ಗಿಸುತ್ತದೆ. ಈಗಿನ ಸಿಐಎಲ್‌ನ ಒಟ್ಟಾರೆ ಆದಾಯ ವೆಚ್ಚದ ಶೇ.50ರಷ್ಟಿದೆ.