ನವದೆಹಲಿ: ಸರ್ಕಾರದ ನಿಯಂತ್ರಣ ಮತ್ತು ಸೆನ್ಸಾರ್‌ಶಿಪ್‌ಗೆ ಹೆಸರುವಾಸಿಯಾದ ಚೀನಾದ ಸಾಮಾಜಿಕ ಮಾಧ್ಯಮ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಮತ್ತು ಗಾಲ್ವಾನ್ ಗಡಿ ಬಗೆಗಿನ ಭಾರತದ ಅಧಿಕೃತ ಹೇಳಿಕೆಗಳನ್ನು ತೆಗೆದುಹಾಕಿದೆ.
ದೇಶದ ಗಡಿ ಪರಿಸ್ಥಿತಿಯ ಬಗ್ಗೆ ಮೋದಿ ಅವರ ಜೂನ್ 18ರ ಹೇಳಿಕೆಗಳು ವೀಚಾಟ್‌ನಲ್ಲಿ ಬಳಕೆದಾರರಿಗೆ ಲಭ್ಯ ಆಗದಂತೆ ಚೀನಾ ಸೆನ್ಸಾರ್ಶಿಪ್ ತಡೆಹಿಡಿದಿತ್ತು. ಈ ಮೂಲಕ ಮೋದಿಯ ಭಾಷಣದ ವಿಡಿಯೋಗಳನ್ನು ಅಳಿಸಿ ಹಾಕಿದೆ.
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ- ಭಾರತ ರಕ್ತಸಿಕ್ತ ಮುಖಾಮುಖಿಯಾದ ನಂತರ ಪ್ರಧಾನಿ ಅವರು ತಮ್ಮ ಹೇಳಿಕೆ ನೀಡಿದ್ದರು. ಸೋಮವಾರ ರಾತ್ರಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ ಕಡೆ ಎಷ್ಟು ಸಾವು-ನೋವು ಸಂಭವಿಸಿದೆ ಎಂದು ಅದು ಬಹಿರಂಗಪಡಿಸಿಲ್ಲ.