ಕರ್ನಾಟಕ

karnataka

ETV Bharat / business

ಚೀನಾ ಪೀಪಲ್ಸ್​ ಬ್ಯಾಂಕ್​ ಸೇರಿ 357 ಚೀನಿ ಹೂಡಿಕೆದಾರರಿಂದ ಐಸಿಐಸಿಐ ಬ್ಯಾಂಕ್​ನ ಷೇರು ಸ್ವಾಧೀನ

ದೇಶಿಯ ಮ್ಯೂಚುವಲ್ ಫಂಡ್‌, ವಿಮಾ ಕಂಪನಿ ಮತ್ತು ಜಾಗತಿಕ ಸಂಸ್ಥೆಗಳನ್ನು ಒಳಗೊಂಡ 357 ಸಾಂಸ್ಥಿಕ ಹೂಡಿಕೆದಾರರಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್ ಕೂಡ ಸೇರಿದೆ. ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ- ವಹಿವಾಟು ಸಂಬಂಧದಲ್ಲಿ ಮೂಗು ತೂರಿಸಿರುವ ಸಂದರ್ಭದಲ್ಲಿ ಈ ಹೂಡಿಕೆ ಹೊರಬಿದ್ದಿದೆ.

ICICI
ಐಸಿಐಸಿಐ

By

Published : Aug 18, 2020, 7:25 PM IST

ನವದೆಹಲಿ: ಹೆಚ್‌ಡಿಎಫ್‌ಸಿಯಲ್ಲಿ ಹಿಡುವಳಿ ಹೂಡಿಕೆ ಬಹಿರಂಗಗೊಂಡ ನಂತರ, ಚೀನಾದ ಕೇಂದ್ರೀಯ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಈಗ ಐಸಿಐಸಿಐ ಬ್ಯಾಂಕಿನಲ್ಲಿ ಈಕ್ವಿಟಿ ಪಾಲು ಪಡೆದುಕೊಂಡಿದೆ.

ಭಾರತದ ಜೊತೆಗೆ ಗಡಿ ಹಂಚಿಕೊಂಡಿರುವ ನೆರೆಯ ರಾಷ್ಟ್ರಗಳು ಎಫ್‌ಡಿಐ ಹೂಡಿಕೆಗೂ ಮುನ್ನ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂಬ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಏಪ್ರಿಲ್‌ನಲ್ಲಿ ತಿಳಿಸಿತ್ತು.

ಬಂಡವಾಳ ಹೂಡಿಕೆಗಳ ಪರಿಶೀಲನಾ ಪ್ರಕ್ರಿಯೆಯ ಮೂಲಕ ಸಾಗಬೇಕೇ ಅಥವಾ ಎಫ್‌ಡಿಐ ಅನುಮೋದನೆ ಸಿಗದ ತನಕ ಈ ಮುಕ್ತ ಮಾರ್ಗದಲ್ಲಿ ಸರ್ಕಾರ ಸಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ.

ಐಸಿಐಸಿಐ ಬ್ಯಾಂಕಿನಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್ ಬಂಡವಾಳ ಹೂಡಿಕೆ ಸಾಧಾರಣವಾಗಿದೆ. ಇತ್ತೀಚೆಗೆ ಐಸಿಐಸಿಐ ಬ್ಯಾಂಕಿನಲ್ಲಿ ಕಂಪನಿಯು ಅರ್ಹ ಸಾಂಸ್ಥಿಕ ವಿತರಣೆ (ಕ್ಯುಐಪಿ) ಮೂಲಕ 15,000 ಕೋಟಿ ರೂ. ಕ್ಯಾಪಿಟಲ್​ ಮತ್ತು 15 ಕೋಟಿ ರೂ. ಹೂಡಿಕೆ ಮಾಡಿತ್ತು.

ದೇಶಿಯ ಮ್ಯೂಚುವಲ್ ಫಂಡ್‌, ವಿಮಾ ಕಂಪನಿ ಮತ್ತು ಜಾಗತಿಕ ಸಂಸ್ಥೆಗಳನ್ನು ಒಳಗೊಂಡ 357 ಸಾಂಸ್ಥಿಕ ಹೂಡಿಕೆದಾರರಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್ ಕೂಡ ಸೇರಿದೆ. ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ- ವಹಿವಾಟು ಸಂಬಂಧದಲ್ಲಿ ಮೂಗು ತೂರಿಸಿರುವ ಸಂದರ್ಭದಲ್ಲಿ ಈ ಹೂಡಿಕೆ ಹೊರಬಿದ್ದಿದೆ.

ಇದಕ್ಕೂ ಮೊದಲು ಚೀನಾ ಪೀಪಲ್ಸ್ ಬ್ಯಾಂಕ್​ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಸುಮಾರು 1.75 ಕೋಟಿಯ ಷೇರುಗಳನ್ನು ಖರೀದಿಸಿ ದೇಶದ ಗಮನ ಸೆಳೆದಿತ್ತು.

ABOUT THE AUTHOR

...view details