ನವದೆಹಲಿ: ಚೀನಾದ ಬಾಟಲ್ ವಾಟರ್ ಕಿಂಗ್ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕೆ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಝಾಂಗ್ ಶನ್ಶನ್ ಖಾಸಗಿ ಬಿಲಿಯನೇರ್ ಆಗಿದ್ದು, ಇದೀಗ ಪತ್ರಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪತ್ರಿಕೋದ್ಯಮ, ಅಣಬೆ ಕೃಷಿ ಮತ್ತು ಆರೋಗ್ಯ ರಕ್ಷಣೆಯಾದ್ಯಂತ ತಮ್ಮ ಉದ್ಯಮವನ್ನು ಹಬ್ಬಿದ ನಂತರ ಶನ್ಶನ್ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಭಾರತದ ಮುಖೇಶ್ ಅಂಬಾನಿ ಮತ್ತು ಚೀನಾದ ಟೆಕ್ ಟೈಕಾನ್ ಜಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಝಾಂಗ್ ಅವರ ನಿವ್ವಳ ಮೌಲ್ಯವು ಈ ವರ್ಷ 70.9 ಶತಕೋಟಿ ಡಾಲರ್ ಏರಿಕೆಯಾಗಿ 77.8 ಶತಕೋಟಿ ಡಾಲರ್ ತಲುಪಿದೆ. ಏಷ್ಯಾ ಖಂಡದ ನಂಬರ್ ಓನ್ ಹಾಗೂ ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಉದ್ಯಮಿ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಸಂಪತ್ತು ಕ್ರೋಢೀಕರಿಸಿಕೊಂಡ ವ್ಯಕ್ತಿ ಎಂಬ ಹೆಗ್ಗಳಿಕೆ ಸಹ ಹೊಂದಿದ್ದಾರೆ. ಈ ವರ್ಷದವರೆಗೂ ಅವರು ಚೀನಾದ ಹೊರಗೆ ಹೆಚ್ಚು ಪರಿಚಿತರಾಗಿರಲಿಲ್ಲ. ಈಗ ಜಗತ್ತಿನ ಎಲ್ಲ ಮಾಧ್ಯಮಗಳು ಅವರ ಬಗ್ಗೆ ವರದಿ ಮಾಡುತ್ತಿವೆ.
ಓದಿ:2020ರ ಯುಗಾಂತ್ಯದಲ್ಲಿ 14,000ಕ್ಕೆ ಜಿಗಿದ ಮುಂಬೈ ಗೂಳಿ: ಪೇಟೆ ಇತಿಹಾಸದಲ್ಲಿ ಇದೇ ಮೊದಲು!
66 ವಯೋಮಾನದ ಝಾಂಗ್ ಯಾವುದೇ ರಾಜಕೀಯದಲ್ಲಿ ಆಗಲಿ ಅಥವಾ ಶ್ರೀಮಂತ ಕುಟುಂಬಗಳೊಂದಿಗೆ ನಂಟುಹೊಂದಿಲ್ಲ. ಹೀಗಾಗಿಯೇ ಅವರನ್ನು ಸ್ಥಳೀಯರು “ಲೋನ್ ವುಲ್ಫ್” ಎಂದು ಕರೆಯುತ್ತಾರೆ.
ಸಂಬಂಧವಿಲ್ಲದ ಎರಡು ಕ್ಷೇತ್ರಗಳಿಗೆ ಅಡಿಯಿಟ್ಟು ಯಶಸ್ಸಿನ ಉದ್ಯಮಿಯಾಗಿದ್ದಾರೆ. ಲಸಿಕೆ ತಯಾರಕ ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್‌ಪ್ರೈಸ್ ಕಂ ಅನ್ನು ಏಪ್ರಿಲ್‌ನಲ್ಲಿ ಸಾರ್ವಜನಿಕ ರಂಗಕ್ಕೆ ತೆರೆದರು. ಈ ನಂತರ ಬಾಟಲಿ ನೀರಿನ ತಯಾರಕ 'ನಾಂಗ್‌ಫು ಸ್ಪ್ರಿಂಗ್ ಕಂಪನಿ'ಯು ಹಾಂಗ್ ಕಾಂಗ್‌ನ ಷೇರುಪೇಟೆ ಪ್ರವೇಶ ಪಡೆಯಿತು. ನಾಂಗ್ಫು ಷೇರುಗಳು ಪ್ರಾರಂಭ ಆದಾಗಿನಿಂದ ಶೇ 155ರಷ್ಟು ವಂಟೈ ಷೇರುಗಳು ಶೇ 2,000ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿವೆ.
ತಂತ್ರಜ್ಞಾನ, ಇ-ಕಾಮರ್ಸ್, ತೈಲ, ಟೆಲಿಕಾಂ ಉದ್ಯಮ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿಯ ಸಂಪತ್ತು 18.3 ಬಿಲಿಯನ್ ಡಾಲರ್ ಹೆಚ್ಚಳವಾಗಿ 76.9 ಬಿಲಿಯನ್ ಡಾಲರ್ಗೆ ತಲುಪಿದೆ.
ಚೀನಾದ ನಿಯಂತ್ರಕರು ಫಿನ್ಟೆ ಉದ್ಯಮಕ್ಕೆ ಹೊಸ ನಿಯಮ ಜಾರಿಗೆ ತರಲು ಪ್ರಾರಂಭಿಸಿದ ಅಕ್ಟೋಬರ್‌ನಿಂದ ಜಾಕ್ ಮಾ ಅವರ ನಿವ್ವಳ ಮೌಲ್ಯವು 12 ಬಿಲಿಯನ್ ಡಾಲರ್ನಷ್ಟು ಕುಸಿದಿದೆ.
ಅಲಿಬಾಬಾದಲ್ಲಿ 56 ವರ್ಷದ ಮಾ ಅವರ ಪಾಲು ಮತ್ತು ಇತರ ಅನೇಕ ಉದ್ಯಮಗಳು ಈ ವರ್ಷ ಅಕ್ಟೋಬರ್‌ನಲ್ಲಿ ಅವರ ಸಂಪತ್ತನ್ನು ಸುಮಾರು 62 ಶತಕೋಟಿಗೆ ಡಾಲರ್ಗೆ ಕೊಂಡೊಯ್ದವು. ಇದು ಅವರನ್ನು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಸಹ ತಂದುಕೊಟ್ಟಿತು. ವಿಶ್ವದ 500 ಶ್ರೀಮಂತ ಜನರ ಸಂಪತ್ತನ್ನು ಪತ್ತೆಹಚ್ಚಿದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ 25ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈಗಿನ ಅವರ ನಿವ್ವಳ ಮೌಲ್ಯವು 50.9 ಬಿಲಿಯನ್ ಡಾಲರ್ ಆಗಿದೆ.