ಬೆಂಗಳೂರು:ಕಾಫಿ ಡೇ ಎಂಟರ್ಪ್ರೈಸಸ್ನ ನಾಪತ್ತೆಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಜಿ. ಸಿದ್ಧಾರ್ಥ್ ಅವರು ಎರಡು ವರ್ಷ ಸಂಬಳ ಪಡೆದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
2 ವರ್ಷ ವೇತನ ಪಡೆಯದೇ ಕಾಫಿ ಡೇ ನಡೆಸಿದ್ದ ಸಿದ್ಧಾರ್ಥ್, ಪತ್ನಿ ಮಾಳವಿಕಾ!
2015-16 ಮತ್ತು 2017-18ರ ನಡುವಿನ ಕಂಪನಿಯ ವಾರ್ಷಿಕ ವರದಿಗಳ ಪ್ರಕಾರ, ಇಬ್ಬರು ಪ್ರವರ್ತಕರು ಕಂಪನಿಯಿಂದ 'ನಿಲ್' ಪರಿಹಾರ ಪಡೆದಿದ್ದರು ಎಂಬುದು ಉಲ್ಲೇಖವಾಗಿದೆ.
2015-16 ಮತ್ತು 2017-18ರ ನಡುವಿನ ಕಂಪನಿಯ ವಾರ್ಷಿಕ ವರದಿಗಳ ಪ್ರಕಾರ, ಇಬ್ಬರು ಪ್ರವರ್ತಕರು ಕಂಪನಿಯಿಂದ 'ನಿಲ್' ಪರಿಹಾರ ಪಡೆದಿದ್ದರು ಎಂಬುದು ಉಲ್ಲೇಖವಾಗಿದೆ. ಸಿದ್ಧಾರ್ಥ್ ಹಾಗೂ ಕಂಪನಿಯ ಇತರೆ ಕಾರ್ಯನಿರ್ವಾಹಕ ನಿರ್ದೇಶಕರೊಂದಿಗೆ 2016-18ರ ಅವಧಿಯ ಮಧ್ಯೆ ಯಾವುದೇ ಸಂಭಾವನೆ ನೀಡಲಾಗಿಲ್ಲ ಎಂದು ತಿಳಿಸಿದೆ.
ಸಂಬಳ ಪಡೆಯದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಾರ್ಥ್ ಜೊತೆಗೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಮತ್ತು ಕೆಕೆಆರ್ ಭಾರತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಓಂ ಪ್ರಕಾಶ್ ನಾಯರ್ ಸೇರಿದ್ದಾರೆ. ವಿಶೇಷವೆಂದರೆ, ಸಾಗರೋತ್ತರ ಹೂಡಿಕೆಯಲ್ಲಿ ಕೆಕೆಆರ್ ಮಾರಿಷಸ್ ಪಿಇ ಕಾಫಿ ಡೇ ಎಂಟರ್ಪ್ರೈಸಸ್ ಎರಡನೇ ಅತಿ ದೊಡ್ಡ ಹೂಡಿಕೆದಾರ.