ಕರ್ನಾಟಕ

karnataka

ETV Bharat / business

ಯೆಸ್​ ಬ್ಯಾಂಕ್​ಗೆ ₹ 3,700 ಕೋಟಿ ವಂಚನೆ: ರಾಣಾ ಕಪೂರ್, ಅವರ ಕುಟುಂಬಸ್ಥರು, ವಾಧವಾನ್ ವಿರುದ್ಧ ಸಿಬಿಐ ಚಾರ್ಜ್-ಶೀಟ್ - ಭ್ರಷ್ಟಾಚಾರ ತಡೆ ಕಾಯ್ದೆ

ವಿಶೇಷ ಸಿಬಿಐ ನ್ಯಾಯಮೂರ್ತಿ ಮುಂದೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಕಪೂರ್, ಅವರ ಮಗಳು ರೋಶ್ನಿ ಕಪೂರ್, ಡೊಲ್ಟ್​ ಅರ್ಬನ್ ವೆಂಚರ್ಸ್​ನ (ಭಾರತ) ಪ್ರವರ್ತಕ, ಡಿಎಚ್‌ಎಫ್‌ಎಲ್‌ನ ಕಪಿಲ್ ಆರ್. ವಾಧವನ್, ಧೀರಜ್ ಆರ್. ವಾಧವನ್​ ಮತ್ತು ಇತರ ಕಂಪನಿಗಳಾದ ಬಿಲೀಫ್ ರಿಯಾಲ್ಟರ್‌ ಮತ್ತು ಆರ್‌ಕೆಡಬ್ಲ್ಯು ಡೆವಲಪರ್‌ ಹೆಸರುಗಳು ಸೇರ್ಪಡೆ ಮಾಡಲಾಗಿದೆ. ಯೆಸ್ ಬ್ಯಾಂಕ್ ಡಿಎಚ್‌ಎಫ್‌ಎಲ್‌ನಲ್ಲಿ ಅಲ್ಪಾವಧಿಯ ಡಿಬೆಂಚರ್‌ಗಳ ರೂಪದಲ್ಲಿ 3,700 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಸಿಬಿಐ ಆರೋಪಿಸಿದೆ. ಇದಕ್ಕಾಗಿ ವಾಧವಾನ್‌ ಅವರು ಕಪೂರ್‌ಗೆ 600 ಕೋಟಿ ರೂ. ಕಿಕ್​ಬ್ಯಾಕ್ ಪಾವತಿಸಿದ್ದಾರೆ ಎಂದಿದೆ.

CBI
ಸಿಬಿಐ

By

Published : Jun 25, 2020, 11:18 PM IST

ಮುಂಬೈ: ಸುಮಾರು 3,700 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ಅವರ ಕುಟುಂಬಸ್ಥರು, ದಿವಾನ್ ಹೌಸಿಂಗ್ ಫೈನಾನ್ಸ್​ನ ಪ್ರವರ್ತಕರು ಮತ್ತು ಸೇರಿದಂತೆ ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಸಿಬಿಐ ನ್ಯಾಯಮೂರ್ತಿ ಮುಂದೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಕಪೂರ್, ಅವರ ಮಗಳು ರೋಶ್ನಿ ಕಪೂರ್, ಡೊಲ್ಟ್​ ಅರ್ಬನ್ ವೆಂಚರ್ಸ್​ನ (ಭಾರತ) ಪ್ರವರ್ತಕ, ಡಿಎಚ್‌ಎಫ್‌ಎಲ್‌ನ ಕಪಿಲ್ ಆರ್. ವಾಧವನ್, ಧೀರಜ್ ಆರ್. ವಾಧವನ್​ ಮತ್ತು ಇತರ ಕಂಪನಿಗಳಾದ ಬಿಲೀಫ್ ರಿಯಾಲ್ಟರ್‌ ಮತ್ತು ಆರ್‌ಕೆಡಬ್ಲ್ಯು ಡೆವಲಪರ್‌ ಹೆಸರುಗಳು ಸೇರ್ಪಡೆ ಮಾಡಲಾಗಿದೆ.

ಯೆಸ್ ಬ್ಯಾಂಕ್ ವಿರುದ್ಧದ ವಂಚನೆ ಆರೋಪಗಳಿಗೆ ಸಂಬಂಧಿಸಿದ ಆರೋಪಿಗಳು ಮತ್ತು ಇತರ ಅಪರಿಚಿತ ಸಂಸ್ಥೆಗಳ ವಿರುದ್ಧ ಸಿಬಿಐ ಭ್ರಷ್ಟಾಚಾರ ತಡೆ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಮಾರ್ಚ್​ನಲ್ಲಿ ಕೇಸ್​ ದಾಖಲಿಸಿಕೊಂಡ ತನಿಖೆ ನಡೆಸಿತು. ಮಾರ್ಚ್ 9ರಂದು ಸಿಬಿಐ ಆರೋಪಿಗಳಿಗೆ ಸಂಬಂಧಿಸಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿತ್ತು.

ಮಾರ್ಚ್ 8ರಂದು ಕಪೂರ್ ಬಂಧನಕ್ಕೊಳಗಾದ ಎರಡು ತಿಂಗಳ ನಂತರ ಜಾರಿ ನಿರ್ದೇಶನಾಲಯ (ಇಡಿ) ಸಹ ಮುಂಬೈ ವಿಶೇಷ ನ್ಯಾಯಾಲಯದ ಮುಂದೆ ಪ್ರತ್ಯೇಕ ಚಾರ್ಜ್‌ಶೀಟ್ ಅನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಆರೋಪಗಳ ಪಟ್ಟಿ ಸಲ್ಲಿಸಿತು.

ಹಗರಣದ ಕಳಂಕಿತ ಡಿಎಚ್‌ಎಫ್‌ಎಲ್‌ಗೆ ಸಂಬಂಧಿಸಿದ ಕಂಪನಿಯೊಂದು ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ನಿಯಂತ್ರಣದಲ್ಲಿರುವ ಕಂಪನಿಗೆ 600 ಕೋಟಿ ರೂ. ಪಾವತಿಸಿದ ಆರೋಪವನ್ನು ಇಡಿ ಪ್ರತ್ಯೇಕವಾಗಿ ಪರಿಶೀಲಿಸುತ್ತಿದೆ.

ಕಪೂರ್​, ಅವರ ಪತ್ನಿ ಮತ್ತು ಮೂವರು ಪುತ್ರಿಯರು ಸೇರಿದಂತೆ ಕೆಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರಿ ಪ್ರಮಾಣದ ಸಾಲ ಮಂಜೂರು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಒಡೆತನದ ಕಂಪನಿಗಳ ಮೂಲಕ ಕಿಕ್‌ಬ್ಯಾಕ್‌ ರೂಪದಲ್ಲಿ ಭಾರಿ ಮೊತ್ತ ಪಡೆದರು. ನಂತರ ಅದು ಕಾರ್ಯನಿರ್ವಹಿಸದ ಸ್ವತ್ತುಗಳಾಗಿ ಮಾರ್ಪಟ್ಟಿದೆ ಎಂದು ಆರೋಪ ಪಟ್ಟಿಯಲ್ಲಿದೆ.

ಡಿಎಚ್‌ಎಫ್‌ಎಲ್ ಸಂಸ್ಥಾಪಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ಅವರನ್ನು ಏಪ್ರಿಲ್‌ನಲ್ಲಿ ಸಿಬಿಐ ಇದೇ ಪ್ರಕರಣದಲ್ಲಿ ಮಹಾಬಲೇಶ್ವರ ಎಂಬ ಗಿರಿಧಾಮದಿಂದ ಬಂಧಿಸಿತ್ತು. ತನಿಖೆ ಆರಂಭವಾದಾಗಿನಿಂದ ಅವರು ಪರಾರಿಯಾಗಿದ್ದರು.

ಯೆಸ್ ಬ್ಯಾಂಕ್ ಡಿಎಚ್‌ಎಫ್‌ಎಲ್‌ನಲ್ಲಿ ಅಲ್ಪಾವಧಿಯ ಡಿಬೆಂಚರ್‌ಗಳ ರೂಪದಲ್ಲಿ 3,700 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಸಿಬಿಐ ಆರೋಪಿಸಿದೆ. ಇದಕ್ಕಾಗಿ ವಾಧವಾನ್‌ ಅವರು ಕಪೂರ್‌ಗೆ 600 ಕೋಟಿ ರೂ. ಕಿಕ್​ಬ್ಯಾಕ್ ಪಾವತಿಸಿದ್ದಾರೆ ಎಂದಿದೆ.

ABOUT THE AUTHOR

...view details