ಖಾರ್ಟೂಮ್: ಕಾಕ್‌ಪಿಟ್‌ನಲ್ಲಿ ಬೆಕ್ಕೊಂದು ಆಶ್ಚರ್ಯಕರವಾಗಿ ಕಾಣಿಸಿಕೊಂಡು ಪೈಲಟ್ ಮೇಲೆ ದಾಳಿ ನಡೆಸಿದ್ದರಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ಕಾಕ್‌ಪಿಟ್‌ನಲ್ಲಿ ಬೆಕ್ಕು ಕಾಣಿಸಿಕೊಂಡು ಪೈಲಟ್ ಮತ್ತು ಸಿಬ್ಬಂದಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ನಂತರ ಕತಾರ್‌ನಿಂದ ಹೊರಟ ವಿಮಾನವು ಸುಡಾನ್‌ನ ರಾಜಧಾನಿ ಖಾರ್ಟೂಮ್‌ಗೆ ಮರಳಿ ತುರ್ತು ಭೂಸ್ಪರ್ಶ ಮಾಡಿತು.
ಟಾರ್ಕೊ ಏವಿಯೇಷನ್ ವಿಮಾನವು ಸುಡಾನ್‌ನ ರಾಜಧಾನಿಯಾದ ಖಾರ್ಟೂಮ್‌ನಿಂದ ಕತಾರ್‌ಗೆ ಹೊರಟಿತ್ತು. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ, ಕಾಕ್‌ಪಿಟ್‌ನಲ್ಲಿ ಬೆಕ್ಕು ಕಾಣಿಸಿಕೊಂಡು ಪೈಲಟ್‌ನ ಮೇಲೆ ದಾಳಿ ನಡೆಸಿತು. ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದು, ಬೆಕ್ಕು ವಿಮಾನಕ್ಕೆ ಹೇಗೆ ಸಿಕ್ಕಿತು ಎಂಬುದು ಸ್ಪಷ್ಟವಾಗಿಲ್ಲ.