ನವದೆಹಲಿ :ದೇಶದ ಅತಿದೊಡ್ಡ ಕಾಫಿ ಸರಪಳಿಗಳಲ್ಲಿ ಒಂದಾದ ಕೆಫೆ ಕಾಫಿ ಡೇ, 2020ರ ವಿತ್ತ ವರ್ಷದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 280 ಮಳಿಗೆಗಳನ್ನು ಮುಚ್ಚಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಕಾಫಿ ಸರಪಳಿ ಕೆಫೆ ಕಾಫಿ ಡೇ (ಸಿಸಿಡಿ) ಸುಮಾರು 280 ಮಳಿಗೆಗಳನ್ನು ಮುಚ್ಚಿದೆ. ಲಾಭದಾಯಕ ಸಮಸ್ಯೆಗಳು ಮತ್ತು ಭವಿಷ್ಯದ ಖರ್ಚಿನಲ್ಲಿ ಹೆಚ್ಚಳವಾಗಬಹುದು ಎಂಬ ಶಂಕೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಳಿಗೆಗಳ ಮುಚ್ಚುವಿಕೆಯೊಂದಿಗೆ ಅದರ ಒಟ್ಟಾರೆ ಕಾಫಿ ಡೇಗಳ ಸಂಖ್ಯೆ 2020ರ ಜೂನ್ 30ರ ವೇಳೆಗೆ 1,480ರಷ್ಟಿವೆ. ಕೆಫೆ ಕಾಫಿ ಡೇ ಈಗ ಕಾಫಿ ಡೇ ಗ್ಲೋಬಲ್ ಒಡೆತನದ ಬ್ರಾಂಡ್ ಆಗಿದೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 15,739ರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಾಫಿ ಸರಪಳಿಯು ದಿನಕ್ಕೆ ಸರಾಸರಿ ಮಾರಾಟದಲ್ಲಿ (ಎಎಸ್‌ಪಿಡಿ) 15,445ಕ್ಕೆ ಇಳಿದಿದೆ ಎಂದು ವರದಿಯಾಗಿದೆ. ಅದರ ವೆಂಡಿಂಗ್ ಮಷಿನ್ಗಳ ಸಂಖ್ಯೆ 2020ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 59,115 ಯುನಿಟ್‌ಗಳಿಗೆ ಏರಿದ್ದು, ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 49,397ರಷ್ಟಿದ್ದವು.