ನವದೆಹಲಿ: ಕ್ಯಾಡ್ಬರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಮ್ಯಾಂಡೆಲ್ಜ್ ಫುಡ್ಸ್ ಪ್ರೈವೇಟ್ ಲಿಮಿಟೆಡ್) ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ತೆರಿಗೆ ಸವಲತ್ತು ಪಡೆಯಲು ಕಂಪನಿಯು ಸತ್ಯಗಳನ್ನು ಮರೆಮಾಚಿದೆ ಎಂದು ಸಿಬಿಐ ಆರೋಪಿಸಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಐದು ಸ್ಥಳಗಳಲ್ಲಿ ಏಕಕಾಲದಲ್ಲಿ ತಪಾಸಣೆ ನಡೆಸಿತು.
ಕ್ಯಾಡ್ಬರಿ 2009-11ರ ನಡುವೆ ಕೇಂದ್ರ ಅಬಕಾರಿ ಅಧಿಕಾರಿಗಳೊಂದಿಗೆ ಸಂಚು ಹೂಡಿದೆ. 5 ಸ್ಟಾರ್ ಮತ್ತು ಜೆಮ್ಸ್ ಚಾಕೊಲೇಟ್ ತಯಾರಿಸುವ ಹಿಮಾಚಲ ಪ್ರದೇಶದ ತನ್ನ ಹೊಸ ಘಟಕಕ್ಕೆ 241 ಕೋಟಿ ರೂ. ಅಬಕಾರಿ ಪ್ರಯೋಜನ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.
ಕೇಂದ್ರ ಅಬಕಾರಿ ಇಲಾಖೆಯ ಅಧೀಕ್ಷಕ ನಿರ್ಮಾಲ್ ಸಿಂಗ್, ಇನ್ಸ್‌ಪೆಕ್ಟರ್ ಜಸ್ಪ್ರೀತ್ ಕೌರ್ ಮತ್ತು ಕ್ಯಾಡ್ಬರಿ ಇಂಡಿಯಾ ಸೇರಿ 10 ಮಂದಿ ಆರೋಪಿಗಳು ಒಳಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ವಶಪಡಿಸಿಕೊಂಡ ಸಾಕ್ಷ್ಯಗಳೊಂದಿಗೆ ಸಿಬಿಐ ಎಫ್ಐಆರ್ ದಾಖಲಿಸಿದೆ.
ಕ್ಯಾಡ್ಬರಿ ಕಂಪನಿಯು ತೆರಿಗೆ ಅಧಿಕಾರಿಗಳೊಂದಿಗೆ ಸೇರಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ. ಕೆಲವು ದಾಖಲೆಗಳನ್ನು ನಾಶಪಡಿಸಿದ್ದಾರೆ. ಪ್ರದೇಶವಾರು ರಿಯಾಯಿತಿಗಳನ್ನು ಸಹ ಪಡೆದಿದ್ದಾರೆ ಎಂದಿದೆ.
2007ರಲ್ಲಿ ಹಿಮಾಚಲ ಪ್ರದೇಶದ ಬಡ್ಡಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಿತ್ತು. ಹೆಚ್ಚುವರಿ 10 ವರ್ಷಗಳ ಸುಂಕ ಮತ್ತು ರಿಯಾಯಿತಿಗಳನ್ನು ಪ್ರಸ್ತಾಪಿಸಿತು. ಆ ನಂತರ ಹೊಸ ಘಟಕವನ್ನು ನಿರ್ಮಿಸದೆ. 2005ರಿಂದ ಅಸ್ತಿತ್ವದಲ್ಲಿದ್ದ ಕಾರ್ಖಾನೆ ಸ್ವಲ್ಪ ಮಟ್ಟಿಗೆ ವಿಸ್ತರಿಸಿದೆ. ಎರಡನೇ ಘಟಕವು ಜುಲೈ 2010ರಲ್ಲಿ ಪರವಾನಗಿ ಪಡೆಯಿತು. ತೆರಿಗೆ ರಿಯಾಯಿತಿಗಳನ್ನು ಪಡೆಯುವ ಗಡುವು ಮುಕ್ತಾಯಗೊಂಡು ಈಗಾಗಲೇ ನಾಲ್ಕು ತಿಂಗಳು ಕಳೆದಿವೆ. ಅಷ್ಟೇ ಅಲ್ಲದೆ ಎರಡನೇ ಘಟಕವು ತೆರಿಗೆ ಕಡಿತಕ್ಕೆ ಅರ್ಹವಾಗಿಲ್ಲ. ಈ ಹಂತದಲ್ಲಿ ಕೇಂದ್ರ ಅಬಕಾರಿ ಅಧಿಕಾರಿ ನಿರ್ಮಲ್ ಸಿಂಗ್ ಅವರು ಮಧ್ಯವರ್ತಿಗಳ ಮೂಲಕ ಜಸ್ಪ್ರೀತ್ ಕೌರ್ ಅವರಿಗೆ ಲಂಚ ನೀಡಿದರು. 241 ಕೋಟಿ ರೂ.ಗೆ ತೆರಿಗೆ ರಿಯಾಯಿತಿ ಪಡೆದರು ಎಂದು ಸಿಬಿಐ ತನಿಖೆಯಲ್ಲಿ ಕಂಡುಕೊಂಡಿದೆ.
ದಾಖಲೆಗಳ ನಾಶ ಮತ್ತು ಲಂಚ ಪಡೆಯುವುದು ಅತಿರೇಕದ ನಡೆಯಾಗಿದೆ ಎಂದು ಸಿಬಿಐ ಖಂಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮೊಂಡೆಲೆಜ್ ಫುಡ್ಸ್ ಪ್ರೈವೇಟ್ ಲಿಮಿಟೆಡ್, 2019ರಲ್ಲಿ ಸರ್ಕಾರ ಪರಿಚಯಿಸಿದ ಯೋಜನೆಯ ಮೂಲಕ ತೆರಿಗೆ ವಿವಾದಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದರು.