ಕರ್ನಾಟಕ

karnataka

ETV Bharat / business

ಇದು ಸಾಧ್ಯವಾಗಿದ್ದು ಪಾಪ್ಯುಲರ್​ ಆ್ಯಪ್​ TikTok​ನಿಂದ ಮಾತ್ರ! - undefined

15 ಭಾಷೆಗಳಲ್ಲಿ ಡಿಜಿಟಲ್ ಇಂಡಿಯಾದ ಮುಖ್ಯಭೂಮಿಕೆಯ ಭಾಗವಾಗಲು ನಮಗೆ ಸಂತೋಷವಾಗಿದೆ. ಭಾರತದಲ್ಲಿ ಟಿಕ್​ಟಾಕ್​ ಸೇವೆ ಆರಂಭಿಸಿದಾಗಿನಿಂದ ಇಲ್ಲಿನ ಬಳಕೆದಾರರ ಡೇಟಾವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟಿದ್ದೇವೆ. ಭಾರತೀಯ ಬಳಕೆದಾರರ ಡೇಟಾ ಪ್ರಥಮ ಸ್ಥಾನದಲ್ಲಿದ್ದು, ಅಮೆರಿಕ ಮತ್ತು ಸಿಂಗಾಪುರ ನಂತರದಲ್ಲಿವೆ. ಈಗ ಮಹತ್ವದ ಹೆಜ್ಜೆ ಇರಿಸುವ ಕಾಲ ಸನ್ನಿಹಿತವಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Jul 21, 2019, 6:14 PM IST

ನವದೆಹಲಿ:ಚೀನಾ ಮೂಲದ ಬೈಟ್ ಡ್ಯಾನ್ಸ್​ ಸಹೋದರ ಕಂಪನಿಯಾದ ಜನಪ್ರಿಯ ಕಿರು ವಿಡಿಯೋ ಅಪ್ಲಿಕೇಷನ್​ ಟಿಕ್​ಟಾಕ್​ನಿಂದಾಗಿ ಭಾರತದಲ್ಲಿ ಪ್ರಥಮ ಬಾರಿಗೆ ಸೋಷಿಯಲ್​​ ಮೀಡಿಯಾದ ಅಂತಾರಾಷ್ಟ್ರೀಯ ಡೇಟಾ ಕೇಂದ್ರ ತಲೆಯತ್ತಲಿದೆ.

ನಮ್ಮ ಪ್ರಬಲ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖವಾದ ಸ್ಥಾನ ಪಡೆದಿದೆ. 15 ಭಾಷೆಗಳಲ್ಲಿ ಡಿಜಿಟಲ್ ಇಂಡಿಯಾದ ಮೇನ್‌ಫ್ರೇಮ್‌ನ ಭಾಗವಾಗಲು ನಮಗೆ ಸಂತೋಷವಾಗಿದೆ. ಭಾರತದಲ್ಲಿ ಟಿಕ್​ಟಾಕ್​ ಸೇವೆ ಆರಂಭಿಸಿದಾಗಿನಿಂದ ಇಲ್ಲಿನ ಬಳಕೆದಾರರ ಡೇಟಾವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟಿದ್ದೇವೆ. ಭಾರತೀಯ ಬಳಕೆದಾರರ ಡೇಟಾ ಪ್ರಥಮ ಸ್ಥಾನದಲ್ಲಿದ್ದು, ಅಮೆರಿಕ ಮತ್ತು ಸಿಂಗಾಪುರ ನಂತರದಲ್ಲಿವೆ. ಈಗ ಮಹತ್ವದ ಹೆಜ್ಜೆ ಇರಿಸುವ ಕಾಲ ಸನಿಹವಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

10- 18 ತಿಂಗಳ ಒಳಗೆ ಭಾರತದಲ್ಲಿ ಡೇಟಾ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಕಂಪನಿ ಇರಿಸಿಕೊಂಡಿದೆ. ಭಾರತದಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ₹ 6,886 ಕೋಟಿಗೆ (1 ಬಿಲಿಯನ್​​ ಡಾಲರ್​) ತೆಗೆದುಕೊಂಡು ಹೋಗುವ ಗುರಿ ಇರಿಸಿಕೊಂಡಿದೆ. ಹೀಗಾಗಿ, ಸ್ಥಳೀಯವಾಗಿ ಡೇಟಾ ಕೇಂದ್ರವನ್ನು ಸ್ಥಾಪಿಸುವ ಇಚ್ಚೆ ಹೊಂದಿದೆ.

For All Latest Updates

TAGGED:

ABOUT THE AUTHOR

...view details