ನವದೆಹಲಿ:ಅಮೆರಿಕದನಲ್ಲಿ ಬೈಟ್‌ಡ್ಯಾನ್ಸ್ ಹೋರಾಟ ಮುಂದುವರೆದಿರುವಂತೆ, ಟಿಕ್‌ಟಾಕ್ ಪರಿಚಯಿಸಿದ ಚೀನಾ ಮೂಲದ ಶಾರ್ಟ್ - ವಿಡಿಯೋ ತಯಾರಿಕೆ ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರವನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಬಹುದೆಂದು ವರದಿ ಆಗಿದೆ.
ಟಿಕ್ ಟಾಕ್ ಭಾರತದಲ್ಲಿ ಸುಮಾರು 22 ಸಾವಿರ ಕೋಟಿ ರೂ ಮೌಲ್ಯದ ವ್ಯವಹಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಮಾರಾಟ ತೀವ್ರ ಕುತೂಹಲ ಕೆರಳಿಸಿದೆ. ಆರಂಭಿಕ ಹಂತದ ಚರ್ಚೆಗಳೊಂದಿಗೆ ಎರಡು ಕಂಪನಿಗಳು ಕಳೆದ ತಿಂಗಳ ಕೊನೆಯಲ್ಲಿ ಪ್ರಾರಂಭಿಸಿದ್ದು, ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ಬೈಟ್‌ಡ್ಯಾನ್ಸ್ ಅಥವಾ ರಿಲಯನ್ಸ್ ಜಿಯೋ ಈ ವರದಿಯ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.
ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್ಡ್ಯಾನ್ಸ್ನಲ್ಲಿ ಕೆಲಸ ಮಾಡುವ ಹಲವಾರು ಉದ್ಯೋಗಿಗಳು ಅಪ್ಲಿಕೇಶನ್‌ನ ನಿಷೇಧದಿಂದಾಗಿ ಬೇರೆಡೆ ಅವಕಾಶಗಳನ್ನು ಹುಡುಕುತ್ತಿರುವ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬೈಟ್‌ಡ್ಯಾನ್ಸ್ ಭಾರತದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಹೊಂದಿದ್ದು, ಹೊಸ ನೇಮಕಾತಿಗೆ ವಿರಾಮ ಹಾಕಿದೆ.