ನವದೆಹಲಿ :ಖಾಸಗೀಕರಣಕ್ಕೆ ಒಳಪಟ್ಟ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅಸ್ಸೋಂನ ನುಮಲಿಗರ್ ಸಂಸ್ಕರಣಾಗಾರದಲ್ಲಿ ತನ್ನ ಒಟ್ಟು ಶೇ.61.5ರಷ್ಟು ಪಾಲನ್ನು ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ಎಂಜಿನಿಯರ್ಸ್ ಇಂಡಿಯಾ ಮತ್ತು ಅಸ್ಸೋಂ ಸರ್ಕಾರದ ಒಕ್ಕೂಟಕ್ಕೆ 9,876 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ಹೇಳಿದೆ.
ಸಂಸ್ಕರಣಾಗಾರದಲ್ಲಿ ತನ್ನ ಷೇರುಗಳನ್ನು ಶೇ.80.16ಕ್ಕೆ ಏರಿಸಲು ಒಐಎಲ್ ಶೇ54.16ರಷ್ಟು ಪಾಲನ್ನು ಖರೀದಿಸಿದೆ ಎಂದು ಕಂಪನಿ ಷೇರು ವಿನಿಮಯದಲ್ಲಿ ತಿಳಿಸಿದೆ.
ಅದರ ಪಾಲುದಾರ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಶೇ 4.4ರಷ್ಟು ಪಾಲನ್ನು ಖರೀದಿಸಿತು. ಉಳಿದ ಶೇ 3.2ರಷ್ಟು ಷೇರು ಅಸ್ಸೋಂ ಸರ್ಕಾರ ಸ್ವಾಧೀನ ಪಡಿಸಿಕೊಂಡಿತು. ನುಮಲೀಗರ್ ರಿಫೈನರಿ ಲಿಮಿಟೆಡ್ (ಎನ್ಆರ್ಎಲ್) ಮಾರಾಟವು ಭಾರತದ 2ನೇ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿಗಳ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ.