ಕರ್ನಾಟಕ

karnataka

ETV Bharat / business

'7 ತಿಂಗಳಲ್ಲಿ BPCL, ಏರ್​ ಇಂಡಿಯಾ ಷೇರು ಮಾರಿ, ಅಕ್ಟೋಬರ್​ಗೆ LICಯ ಐಪಿಒ ಬಿಡುಗಡೆ' - ಡಿಐಪಿಎಎಂ ಕಾರ್ಯದರ್ಶಿ ಬಿಪಿಸಿಎಲ್​ ಷೇರು ಮಾರಾಟ

ಸಾಂಕ್ರಾಮಿಕ ಜರ್ಜರಿತವಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರವು ತನ್ನಲ್ಲಿನ ಆಸ್ತಿ ಮಾರಾಟದಿಂದ 1.75 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಆರ್ಥಿಕ ವರ್ಷದಲ್ಲಿ ಶಿಪ್ಪಿಂಗ್ ಕಾರ್ಪೊರೇಷನ್​ ಆಫ್ ಇಂಡಿಯಾ (ಎಸ್‌ಸಿಐ), ಐಡಿಬಿಐ ಬ್ಯಾಂಕ್ ಲಿಮಿಟೆಡ್ ಮತ್ತು ಇತರ ಎರಡು ಸಾರ್ವಜನಿಕ ವಲಯದ ಸಾಲಗಾರ ಸಂಸ್ಥೆಗಳನ್ನ ಮಾರಾಟ ಮಾಡಲು ಮುಂದಾಗಿದೆ. ಈ ಪ್ರಕ್ರಿಯೆಯು ಏಪ್ರಿಲ್ 1ರಿಂದ ಪ್ರಾರಂಭವಾಗುತ್ತದೆ.

BPCL
BPCL

By

Published : Feb 2, 2021, 7:30 PM IST

ನವದೆಹಲಿ:ಭಾರತದ ಅತಿದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವವಿಮಾ ನಿಗಮದವು ಈ ವರ್ಷದ ಅಕ್ಟೋಬರ್ ನಂತರ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪರಿಚಯಿಸಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಮತ್ತು ತೈಲ ಸಂಸ್ಥೆ ಬಿಪಿಸಿಎಲ್ ಮಾರಾಟ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ಜರ್ಜರಿತವಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರವು ತನ್ನಲ್ಲಿನ ಆಸ್ತಿ ಮಾರಾಟದಿಂದ 1.75 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಆರ್ಥಿಕ ವರ್ಷದಲ್ಲಿ ಶಿಪ್ಪಿಂಗ್ ಕಾರ್ಪೊರೇಷನ್​ ಆಫ್ ಇಂಡಿಯಾ (ಎಸ್‌ಸಿಐ), ಐಡಿಬಿಐ ಬ್ಯಾಂಕ್ ಲಿಮಿಟೆಡ್ ಮತ್ತು ಇತರ ಎರಡು ಸಾರ್ವಜನಿಕ ವಲಯದ ಸಾಲಗಾರ ಕಂಪನಿಗಳ ಮಾರಾಟ ಮಾಡಲು ಮುಂದಾಗಿದೆ. ಈ ಪ್ರಕ್ರಿಯೆಯು ಏಪ್ರಿಲ್ 1ರಿಂದ ಪ್ರಾರಂಭವಾಗುತ್ತದೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮಾತನಾಡಿ, ಹಣಕಾಸು ಮಸೂದೆ ಮೂಲಕ ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಮತ್ತು ಐಡಿಬಿಐ ಬ್ಯಾಂಕಿನಲ್ಲಿನ ಪಾಲನ್ನು ಹೂಡಿಕೆ ಮಾಡಲು ಬೇಕಾದ ಕಾನೂನುಗಳ ತಿದ್ದುಪಡಿಗಳನ್ನು ಸರ್ಕಾರ ಪರಿಚಯಿಸಿದೆ. 2021ರ ಬಜೆಟ್ ಜೊತೆಗೆ ಮಂಡಿಸಲಾಗಿದೆ ಎಂದು ಹೇಳಿದರು.

ಆರ್ಥಿಕತೆಯನ್ನು ಕುಸಿದ ತೊಟ್ಟಿಯಿಂದ ಹೊರತೆಗೆಯಲು ಮೋದಿ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ ದಾಖಲೆಯ ಬಂಡವಾಳ ವೆಚ್ಚದ ಗುರಿ ಇರಿಸಿಕೊಂಡಿದೆ. ಅದಕ್ಕೆ ಅಗತ್ಯವಾದ ಹೆಚ್ಚುವರಿ ಸಂಪನ್ಮೂಲಗಳನ್ನು ಹೂಡಿಕೆ ಹಿಂತೆಗೆತ ಮತ್ತು ಹಣಗಳಿಕೆಯ ಮೂಲಕ ಸಂಗ್ರಹಿಸಬೇಕಿದೆ.

ಇದನ್ನೂ ಓದಿ: ದೇಶದ ಸಕ್ಕರೆ ಉತ್ಪಾದನೆ ಶೇ 25ರಷ್ಟು ಏರಿಕೆ: ಯುಪಿ ನಂ.1, ಕರ್ನಾಟಕಕ್ಕೆ ಯಾವ ಸ್ಥಾನ?

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಏರ್ ಇಂಡಿಯಾದ ಷೇರುಗಳ ಮಾರಾಟಕ್ಕೆ ಈಗಾಗಲೇ ಆಸಕ್ತಿಯ ಪ್ರಾಥಮಿಕ ಅಭಿವ್ಯಕ್ತಿ ಪಡೆದಿದೆ. ಎಸ್‌ಸಿಐಗೆ ಫೆಬ್ರವರಿ 13ರಂದು ಬರಲಿದೆ.

ಎಲ್‌ಐಸಿ ತಿದ್ದುಪಡಿ ಕಾಯ್ದೆ ಮತ್ತು ಐಡಿಬಿಐ ಬ್ಯಾಂಕ್‌ಗೆ ತಿದ್ದುಪಡಿ ಕಾಯ್ದೆಯನ್ನು ಹಣಕಾಸು ಮಸೂದೆಯ ಭಾಗವಾಗಿ ರೂಪಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಮಸೂದೆ ಇರುವುದಿಲ್ಲ. ಅಕ್ಟೋಬರ್ ನಂತರ ಎಲ್‌ಐಸಿ ಐಪಿಒಗೆ ಬರಲಿದೆ ಎಂದು ಪಾಂಡೆ ಹೇಳಿದರು.

ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸರ್ಕಾರದ ಈಕ್ವಿಟಿ ನಿರ್ವಹಿಸುವ ಡಿಐಪಿಎಎಂ, ಆರಂಭಿಕ ಸಾರ್ವಜನಿಕ ಕೊಡುಗೆಗಿಂತ ಮುಂಚಿತವಾಗಿ, ಎಲ್‌ಐಸಿಯಲ್ಲಿನ ಮೌಲ್ಯವನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ವಾಸ್ತವಿಕ ಸಂಸ್ಥೆ ಮಿಲಿಮನ್ ಸಲಹೆಗಾರರನ್ನು ಆಯ್ಕೆ ಮಾಡಿದೆ. ಡೆಲಾಯ್ಟ್ ಮತ್ತು ಎಸ್‌ಬಿಐ ಕ್ಯಾಪ್ಸ್ ಅನ್ನು ಐಪಿಒ ಪೂರ್ವ ವಹಿವಾಟು ಸಲಹೆಗಾರರಾಗಿ ನೇಮಿಸಲಾಗಿದೆ.

2002ರಲ್ಲಿ ಐಡಿಬಿಐ ಬ್ಯಾಂಕ್ ರಚನೆಯಾದಾಗ ಐಡಿಬಿಐ ರಿಪೀಲ್ ಆಕ್ಟ್ ಇತ್ತು. ಅದರ ಅಡಿ ಬ್ಯಾಂಕಿಂಗ್ ಕಾರ್ಯಾಚರಣೆ ಒದಗಿಸಲಾಯಿತು. ಪರವಾನಗಿಯನ್ನು ಸಹ ನೀಡಲಾಯಿತು. ಆದ್ದರಿಂದ ಹೂಡಿಕೆ ಮಾಡಿದರೆ ಪರವಾನಗಿ ಮುಂದುವರಿಯಬೇಕಾಗುತ್ತದೆ. ಆದ್ದರಿಂದ ಅದು ಆಗಬೇಕಾದರೆ, ಆರ್‌ಬಿಐಯೊಂದಿಗೆ ಸಮಾಲೋಚಿಸಿ, ಹಣಕಾಸು ಕಾಯ್ದೆಯ ಭಾಗವಾಗಿರುವ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಪಾಂಡೆ ತಿಳಿಸಿದರು.

ABOUT THE AUTHOR

...view details