ಕರ್ನಾಟಕ

karnataka

ETV Bharat / business

ಬಯೋಕಾನ್​ ಕೊರೊನಾ ಇಂಜೆಕ್ಷನ್​ ಬೆಲೆ 8 ಸಾವಿರ ರೂ.; ಗುಣಮುಖರಾಗಲು ಎಷ್ಟು ಇಂಜೆಕ್ಷನ್ ಬೇಕು?

'ಇಟೊಲಿಝುಮಾಬ್' ಔಷಧಿಯನ್ನು ಸಾಮಾನ್ಯದಿಂದ (ಮಾಡರೇಟ್‌) ಗಂಭೀರ (ಸಿವಿಯರ್‌) ಸ್ವರೂಪದ ಕೋವಿಡ್​-19 ರೋಗಿಗಳ ಚಿಕಿತ್ಸೆಗೆ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿತ್ತು. 25 ಎಂಜಿಯ 5 ಎಂಎಲ್ ಇಂಜೆಕ್ಷನ್​ನಿಂದ ಕೊರೊನಾದಿಂದ ತೀವ್ರ ಹಾಗೂ ಮಧ್ಯಮ ಬಾಧಿತ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರತಿ ಇಂಜೆಕ್ಷನ್ ಬಾಟಲಿ ಬೆಲೆ 8 ಸಾವಿರ ರೂ. ಆಗಿರುತ್ತದೆ.

Biocon
ಬಯೋಕಾನ್

By

Published : Jul 13, 2020, 10:53 PM IST

ಬೆಂಗಳೂರು: ಸಿಲಿಕಾನ್ ಸಿಟಿ ಮೂಲದ ಬಯೋಕಾನ್​ ಕಂಪನಿ ತಾನು ತಯಾರಿಸಿದ ಇಟೊಲಿಝುಮಾಬ್ ಇಂಜೆಕ್ಷನ್​ಗೆ ಡಿಸಿಜಿಐನಿಂದ ಅನುಮೋದನೆ ಪಡೆದಿತ್ತು. ಈಗ ಅದರ ಬೆಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

'ಇಟೊಲಿಝುಮಾಬ್' ಔಷಧಿಯನ್ನು ಸಾಮಾನ್ಯದಿಂದ (ಮಾಡರೇಟ್‌) ಗಂಭೀರ (ಸಿವಿಯರ್‌) ಸ್ವರೂಪದ ಕೋವಿಡ್​-19 ರೋಗಿಗಳ ಚಿಕಿತ್ಸೆಗೆ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿತ್ತು.

ಇಟೊಲಿಝುಮಾಬ್ ಇಂಜೆಕ್ಷನ್​, ಮಾಡರೇಟ್​ ಟು ಸಿವಿಯರ್​ ತೊಡಕು ಹೊಂದಿರುವ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದಲ್ಲಿ ಎಲ್ಲಿಯಾದರೂ ಬಳಸಲು ಅನುಮೋದನೆ ಪಡೆದ ಮೊದಲ ಜೈವಿಕ ಔಷಧವಾಗಿದೆ.

"ಮಧ್ಯಮ ಹಾಗೂ ತೀವ್ರ ಕೋವಿಡ್-19 ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೋವಲ್ ಬಯೋಲಾಜಿಕಲ್ ಥೆರಪಿಯನ್ನು ನೀಡಲು ಡಿಸಿಐಜಿ ಅನುಮೋದನೆ ನೀಡಿದ್ದು, 'ಇಟೊಲಿಝುಮಾಬ್' ಹಲವರ ಜೀವವನ್ನು ಉಳಿಸಿದೆ. ಈಗ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ." ಎಂದು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.

25ಎಂಜಿಯ 5 ಎಂಎಲ್ ಇಂಜೆಕ್ಷನ್​ನಿಂದ ತೀವ್ರ ಹಾಗೂ ಮಧ್ಯಮ ಭಾದಿತ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರತಿ ಇಂಜೆಕ್ಷನ್ ಬೆಲೆ 8 ಸಾವಿರ ರೂಪಾಯಿಗಳಾಗಿದ್ದು, ಇಂತಹ ನಾಲ್ಕು ಇಂಜೆಕ್ಷನ್​ಗಳನ್ನು ನೀಡಬೇಕಾಗುತ್ತದೆ. ಅಂದರೆ ಚಿಕಿತ್ಸೆಗಾಗಿ ಒಟ್ಟು ವೆಚ್ಚ 32 ಸಾವಿರ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details