ನವದೆಹಲಿ:ಕೊರೊನಾ ವೈರಸ್ನ ಸಾಂಕ್ರಾಮಿಕ ರೋಗ ಎದುರಿಸಲು ವಿಜ್ಞಾನ ಆಧಾರಿತ ನಾಯಕತ್ವ ಮತ್ತು ನೀತಿ ಹೊಂದಬೇಕೆಂದು ರಾಷ್ಟ್ರಗಳಿಗೆ ಕರೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸೌಮ್ಯಾ ಸ್ವಾಮಿನಾಥನ್ ಹೇಳಿಕೆಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಧ್ವನಿಗೂಡಿಸಿದ್ದಾರೆ.
ರಾಷ್ಟ್ರಗಳಿಗೆ ವಿಜ್ಞಾನ ಆಧಾರಿತ ನಾಯಕತ್ವ: WHO ವಿಜ್ಞಾನಿ ಸೌಮ್ಯಾ ಹೇಳಿಕೆಗೆ ಕಿರಣ್ ಧ್ವನಿ - ಸೌಮ್ಯಾ ಸ್ವಾಮಿನಾಥನ್ರ ವಿಜ್ಞಾನ ಆಧಾರಿತ ನಾಯಕತ್ವ
ಮೇ 22ರಂದು ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್, ಸೈನ್ಸಸ್ ಹಾಗೂ ಟೆಕ್ನಾಲಜಿಯ 37ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ್ದ ಡಾ. ಸ್ವಾಮಿನಾಥನ್, ರಾಷ್ಟ್ರಗಳು ವಿಜ್ಞಾನ ಆಧಾರಿತ ನಾಯಕತ್ವ ಮತ್ತು ನೀತಿಯನ್ನು ಹೊಂದಿರಬೇಕು. ಪುರಾವೆ ಆಧಾರಿತ ಮಾರ್ಗಸೂಚಿಗಳನ್ನು ಅನುಸರಿಸೇಕು. ಹೊಸ ಪುರಾವೆಗಳು ಹೊರ ಹೊಮ್ಮುತ್ತಿದ್ದಂತೆ ಅದನ್ನು ಪರಿಶೀಲಿಸಲು ಸಾಧಿಸಲು ಹೊಂದಿಕೊಳ್ಳ ಬಲ್ಲವು. ವಿಜ್ಞಾನ ಹಾಗೂ ತಂತ್ರಜ್ಞಾನದ ಹಲವು ಸಾಧನಗಳನ್ನು ಹೊಂದಿದ್ದರೂ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ರಾಷ್ಟ್ರಗಳಿಗೆ ಸಾಧ್ಯವಾಗದೇ ಇರಲು ಇದುವೇ ಕಾರಣ ಇರಬಹುದು ಎಂದು ಹೇಳಿದ್ದರು.
ಮೇ 22ರಂದು ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್, ಸೈನ್ಸಸ್ ಹಾಗೂ ಟೆಕ್ನಾಲಜಿಯ 37ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ್ದ ಡಾ. ಸ್ವಾಮಿನಾಥನ್, ರಾಷ್ಟ್ರಗಳು ವಿಜ್ಞಾನ ಆಧಾರಿತ ನಾಯಕತ್ವ ಮತ್ತು ನೀತಿಯನ್ನು ಹೊಂದಿರಬೇಕು. ಪುರಾವೆ ಆಧಾರಿತ ಮಾರ್ಗಸೂಚಿಗಳನ್ನು ಅನುಸರಿಸೇಕು. ಹೊಸ ಪುರಾವೆಗಳು ಹೊರಹೊಮ್ಮುತ್ತಿದ್ದಂತೆ ಅದನ್ನು ಪರಿಶೀಲಿಸಲು ಸಾಧಿಸಲು ಹೊಂದಿಕೊಳ್ಳಬಲ್ಲವು. ವಿಜ್ಞಾನ ಹಾಗೂ ತಂತ್ರಜ್ಞಾನದ ಹಲವು ಸಾಧನಗಳನ್ನು ಹೊಂದಿದ್ದರೂ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ರಾಷ್ಟ್ರಗಳಿಗೆ ಸಾಧ್ಯವಾಗದೇ ಇರಲು ಇದುವೇ ಕಾರಣ ಇರಬಹುದು ಎಂದು ಹೇಳಿದ್ದರು.
ರಾಷ್ಟ್ರಗಳು ವಿಜ್ಞಾನ ಆಧಾರಿತ ನಾಯಕತ್ವವನ್ನು ಹೊಂದಿರಬೇಕು ಮತ್ತು ಕೋವಿಡ್-19ನಂತಹ ಕ್ರಿಯಾತ್ಮಕ ಸಾಂಕ್ರಾಮಿಕ ರೋಗದ ಮೇಲೆ ಹಿಡಿತ ಸಾಧಿಸಲು ಪುರಾವೆ ಆಧಾರಿತ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಡಾಕ್ಟರ್ ಸೌಮ್ಯ ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ.