ನವದೆಹಲಿ: ಲಾಕ್‌ಡೌನ್ 4.0 ಹೊಸ ಮಾರ್ಗಸೂಚಿಗಳನ್ನು ಅನುಸರಿಸಿ 11 ರಾಜ್ಯಗಳ 35ಕ್ಕೂ ಅಧಿಕ ನಗರಗಳಲ್ಲಿ ಕಾರ್ಯಾಚರಣೆ ಪುನರಾರಂಭಿಸುತ್ತಿದ್ದೇವೆ ಎಂದು ಬೈಕ್ ಟ್ಯಾಕ್ಸಿ ಸೇವಾ ಪೂರೈಕೆದಾರ ರ್ಯಾಪಿಡೊ ಹೇಳಿದೆ.
ಸದ್ಯಕ್ಕೆ, ನಮ್ಮ ಬೈಕ್ ಟ್ಯಾಕ್ಸಿ ಸೇವೆಗಳು ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕಾರ್ಯನಿರ್ವಹಿಸಲಿವೆ. ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ ಕೆಂಪು ವಲಯಗಳಿಗೆ ಸೇವೆ ವಿಸ್ತರಿಸಲಾಗುವುದಿಲ್ಲ. ಆ್ಯಪ್ನಲ್ಲಿ ವಿವಿಧ ನಗರಗಳ ಸ್ಥಿತಿ ಮತ್ತು ಸುರಕ್ಷತಾ ಸೂಚನೆಗಳ ಅನುಸಾರ ನವೀಕರಿಸುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.