ಕರ್ನಾಟಕ

karnataka

ETV Bharat / business

ದೀಪಾವಳಿಗೆ LIC ಐಪಿಒ ಷೇರಿಗೆ ಚಾಲನೆ: ವಿಮಾ ಪಾಲಿಸಿದಾರರಿಗೆ ಸಿಗುವ ಷೇರುಗಳೆಷ್ಟು? - ಎಲ್​ಐಸಿ ಹೂಡಿಕೆ ಹಿಂತೆಗೆತ

ಹೂಡಿಕೆ ಹಿಂತೆಗೆತ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಸಂದರ್ಶನದಲ್ಲಿ ಮಾತನಾಡಿ, ಎಲ್‌ಐಸಿ ಒಂದು ಸಂಕೀರ್ಣವಾದ ಕಾರ್ಯವಾಗಿದೆ. ಆದರೆ, ಸರ್ಕಾರವು ಈ ಸವಾಲನ್ನು ಎದುರಿಸುತ್ತಿದೆ. ಅಕ್ಟೋಬರ್‌ನಲ್ಲಿ ಮಾರುಕಟ್ಟೆ ಕೊಡುಗೆ ಪೂರ್ಣಗೊಳಿಸುತ್ತದೆ ಎಂದರು.

LIC
LIC

By

Published : Feb 4, 2021, 7:44 PM IST

ನವದೆಹಲಿ:ಸಾರ್ವಜನಿಕ ವಲಯದ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ), ಈ ದೀಪಾವಳಿಗೆ ಭಾರತೀಯ ಷೇರು ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಕಾಶಮಾನ ತಂದು ಕೊಡಲಿದೆ.

ಸುದ್ದಿ ಸಂಸ್ಥೆ ಜತೆ ಮಾತನಾಡಿದ ಹೂಡಿಕೆ ಹಿಂತೆಗೆತ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ, ಎಲ್‌ಐಸಿ ಒಂದು ಸಂಕೀರ್ಣವಾದ ಕಾರ್ಯವಾಗಿದೆ, ಆದರೆ, ಸರ್ಕಾರವು ಈ ಸವಾಲನ್ನು ಎದುರಿಸುತ್ತಿದೆ. ಅಕ್ಟೋಬರ್‌ನಲ್ಲಿ ಮಾರುಕಟ್ಟೆ ಕೊಡುಗೆ ಪೂರ್ಣಗೊಳಿಸುತ್ತದೆ ಎಂದರು.

ಐಪಿಒ ಅಕ್ಟೋಬರ್ ನಂತರ ಸಂಭವಿಸಬಹುದು. ದೀಪಾವಳಿಯ ಆಜುಬಾಜಿನಲ್ಲಿ ನಡೆಯಲಿದೆ ಎಂದು ಪಾಂಡೆ ಸಂದರ್ಶನದಲ್ಲಿ ಹೇಳಿದರು.

ಎಲ್ಐಸಿಯ ಐಪಿಒ ಮಾರ್ಗದಲ್ಲಿ ಎಲ್ಲ ಅಸಂಗತತೆಗಳನ್ನು ತೆರವುಗೊಳಿಸುವ ಯೋಜನೆಯನ್ನು ಸರ್ಕಾರ ಈಗಾಗಲೇ ಪ್ರಾರಂಭಿಸಿದೆ. ಐಪಿಒಗೆ ಅಗತ್ಯವಾದ ತಿದ್ದುಪಡಿ ಈಗಾಗಲೇ 2021ರ ಹಣಕಾಸು ಮಸೂದೆಯ ಭಾಗವಾಗಿ ಸೇರಿಸಲಾಗಿದೆ. ಸಂಸತ್ತು ಕೇಂದ್ರ ಬಜೆಟ್‌ಗೆ ಅನುಮೋದನೆ ನೀಡಿದ ಬಳಿಕ ಅದು ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ ಅನ್ನು ಸೋಮವಾರ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,'ಎಲ್ಐಸಿ ಐಪಿಒ ಸೇರಿದಂತೆ ಘೋಷಿತ ಎಲ್ಲ ಹೂಡಿಕೆ ಪ್ರಸ್ತಾಪಗಳನ್ನು ಈ ಹಣಕಾಸು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದರು. ಕಳೆದ ವರ್ಷದ ಬಜೆಟ್‌ನಲ್ಲಿ ಕೂಡ ಐಪಿಒ ಕುರಿತು ದೊಡ್ಡ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಥಾರ್ ಇಂಜಿನ್​ನಲ್ಲಿ ದೋಷ: 1,577 ಎಸ್​ಯುವಿ ಹಿಂಪಡೆಯಲಿದೆ ಮಹೀಂದ್ರಾ

ಎಲ್‌ಐಸಿ ಪ್ರಸ್ತಾಪದ ಗಾತ್ರದ ಮೇಲೆ ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ (ಐಪಿಒ) ನೀಡಬೇಕಾದ ಷೇರುಗಳ ಪ್ರಮಾಣವು ಎಂಬೆಡೆಡ್ ಮೌಲ್ಯ ಮತ್ತು ಗಾತ್ರ ಅವಲಂಬಿಸಿರುತ್ತದೆ. ವಿಮಾ ದೈತ್ಯರಿಗೆ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಂಡೆ ಹೇಳಿದರು.

ಇದು ಜನರು ನಂಬಿಕೆ ಇಟ್ಟಿರುವ ಒಂದು ಬಹುದೊಡ್ಡ ಸಂಸ್ಥೆ. ಅವರ ನಂಬಿಕೆಯನ್ನು ಮುರಿಯಲು ನಾವು ಬಯಸುವುದಿಲ್ಲ. ನಾವು ಅವರನ್ನು ಮಾಲೀಕರು (ಷೇರುದಾರರು) ಎಂದು ಕರೆದಿದ್ದೇವೆ ಎಂದು ತಿಳಿಸಿದರು.

ಪಾಲಿಸಿ ಹೊಂದಿರುವವರಿಗೆ ಒಟ್ಟು ಷೇರುಗಳಲ್ಲಿ ಶೇ 10ರಷ್ಟು ಕಾಯ್ದಿರಿಸಲು ತಿದ್ದುಪಡಿ ಮಾಡಿ ಮಸೂದೆ ತರಲಾಗಿದೆ ಎಂದರು.

ABOUT THE AUTHOR

...view details