ನವದೆಹಲಿ: ದೇಶಿ- ವಿದೇಶಗಳಲ್ಲಿ ಹಲವು ಉದ್ಯಮಗಳನ್ನು ಸ್ಥಾಪಿಸಿರುವ ಭಾರತದ ಖ್ಯಾತ ಉದ್ಯಮಿ/ ಟಾಟಾ ಗ್ರೂಪ್ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ಮ' ನೀಡಿ ಗೌರವಿಸಬೇಕು ಎಂದು ಟ್ವಿಟ್ಟರ್ನಲ್ಲಿ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ.
ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಟಾಟಾ ಸಮೂಹದಿಂದ 1,500 ಕೋಟಿ ರೂ. ದೇಣಿಗೆ ನೀಡಿದ್ದು ಸಾಕಷ್ಟು ನೆಟ್ಟಿಗರು ಪ್ರಶಂಸಿಸಿದರು. ಈಗ ಅದೇ ನೆಟ್ಟಿಗರು ಕೇಂದ್ರ ಸರ್ಕಾರ ರತನ್ ಟಾಟಾ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಸರಣಿ ಟ್ವೀಟ್ ಮಾಡುತ್ತಿದ್ದಾರೆ.