ನವದೆಹಲಿ: ಭಾರತ್ ಬಯೋಟೆಕ್ ಮಂಗಳವಾರ 13,000 ಸ್ವಯಂಸೇವಕರ ನೇಮಕಾತಿಯನ್ನು ಪ್ರಕಟಿಸಿದ್ದು, ದೇಶದ ಹಲವು ಸ್ಥಳಗಳಲ್ಲಿನ ಕೋವಿಡ್ -19 ಲಸಿಕೆ 'ಕೋವ್ಯಾಕ್ಸಿನ್'ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ 26,000 ಜನರನ್ನು ಸೇರಿಸಿಕೊಳ್ಳುವತ್ತ ಹೆಜ್ಜೆ ಇರಿಸಿದೆ.
ಕೋವ್ಯಾಕ್ಸಿನ್ನ ಮೊದಲನೇ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಸುಮಾರು 1,000 ವಿಷಯಗಳ ಮೌಲ್ಯಮಾಪನ ಮಾಡಲಾಗಿದೆ. ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಫಲಿತಾಂಶಗಳು ಭರವಸೆಯಾಗಿ ಕಂಡುಬಂದಿವೆ ಎಂದು ಭಾರತ್ ಬಯೋಟೆಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಯಮಿ ದಿಗ್ಗಜ ರತನ್ ಟಾಟಾಗೆ 'ಜಾಗತಿಕ ದಾರ್ಶನಿಕ ಮತ್ತು ಶಾಂತಿ ಪ್ರಶಸ್ತಿ'
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದೆ.
ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ 13,000 ಸ್ವಯಂಸೇವಕರನ್ನು ಯಶಸ್ವಿಯಾಗಿ ನೇಮಕ ಮಾಡಿದೆ. ಪ್ರಯೋಗಕ್ಕೆ 26,000 ಸ್ವಯಂ ಸೇವಕರನ್ನು ನೇಮಿಸಿಕೊಳ್ಳುವ ಗುರಿ ಹೊಂದಿದೆ. ನವೆಂಬರ್ ಮಧ್ಯದಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಿತ್ತು.