ಕರ್ನಾಟಕ

karnataka

ETV Bharat / business

ಜಾಗತಿಕ ಶ್ರೀಮಂತಿಕೆಯಲ್ಲಿ ಬಿಲ್​ ಗೇಟ್ಸ್​ನನ್ನೇ ಹಿಂದಿಕ್ಕಿದ 70ರ ವೃದ್ಧ ಉದ್ಯಮಿ -

* ಸಮಾಜಮುಖಿ ಕಾರ್ಯಗಳಿಗೆ ₹ 2.41 ಲಕ್ಷ ಕೋಟಿ (35 ಬಿಲಿಯನ್​ ಡಾಲರ್​) ನೀಡುತ್ತಿರುವ ಬಿಲ್​​ ಆ್ಯಂಡ್​ ಮಿಲಿಂದ್ ಗೇಟ್ಸ್​ ಫೌಂಡೇಷನ್​ ನಂ-1 * ಒಂದು ವರ್ಷ ಅವಧಿಯಲ್ಲಿ ₹ 2.6 ಲಕ್ಷ ಕೋಟಿ ಆಸ್ತಿ ಮೌಲ್ಯ ಹೆಚ್ಚಿಸಿಕೊಂಡ ಬರ್ನಾರ್ಡ್​ ಅರ್ನಾಲ್ಟ್​ ಟಾಪ್​-2ರಲ್ಲಿ ಸ್ಥಾನ

ಸಾಂದರ್ಭಿಕ ಚಿತ್ರ

By

Published : Jul 17, 2019, 6:50 PM IST

ನವದೆಹಲಿ:ವಿಶ್ವದ ಶ್ರೀಮಂತ ಉದ್ಯಮಿಗಳ ಸ್ಥಾನದಲ್ಲಿ ಅಗ್ರ 2ನೇ ಸ್ಥಾನದಲ್ಲಿ ಮುಂದುವರೆದಿದ್ದ ಮೈಕ್ರೋಸಾಫ್ಟ್​ ಕಂಪನಿಯ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರನ್ನು ಫ್ರಾನ್ಸ್​ ಉದ್ಯಮಿ ಹಿಂದಿಕ್ಕಿದ್ದಾರೆ.

ಖಾಸಗಿ ಸುದ್ದಿ ತಾಣ ನಡೆಸಿಕೊಂಡು ಬರುತ್ತಿರುವ ಸಮೀಕ್ಷೆಯಲ್ಲಿ 70ರ ವಯೋಮಾನದ ಬರ್ನಾರ್ಡ್​ ಅರ್ನಾಲ್ಟ್​ ಅವರು ಬಿಲ್​ ಗೇಟ್ಸ್​ ಅವರನ್ನು ಮೂರನೇ ಸ್ಥಾನಕ್ಕೆ ತಳಿ ಎರಡನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ.

ಅರ್ನಾಲ್ಟ್ ಅವರು,​ ಐಷಾರಾಮಿ ಸರಕುಗಳ ತಯಾರಿಕೆಗಳ ಲೂಯಿ ವಿಟಾನ್ ಅವರ ಮಾಲೀಕತ್ವದ ಎಲ್​ವಿಎಂಎಚ್​ನ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ. 7.43 ಲಕ್ಷ ಕೋಟಿ ರೂ.ಯಷ್ಟು (108 ಬಿಲಿಯನ್​ ಡಾಲರ್​) ಸಂಪತ್ತು ಹೊಂದಿದ್ದಾರೆ. ಕಳೆದ ಒಂದು ವರ್ಷ ಅವಧಿಯಲ್ಲಿ ₹ 2.6 ಲಕ್ಷ ಕೋಟಿ (39 ಬಿಲಿಯನ್ ಡಾಲರ್​​) ಆಸ್ತಿ ಗಳಿಸಿಕೊಂಡಿದ್ದಾರೆ.

7.36 ಲಕ್ಷ ಕೋಟಿ ರೂ. (107 ಬಿಲಿಯನ್​ ಡಾಲರ್​) ಮೂಲಕ ಮೂರನೇ ಸ್ಥಾನದಲ್ಲಿ ಬಿಲ್​ ಗೇಟ್ಸ್​ ಇದ್ದಾರೆ. ಸಮಾಜಮುಖಿ ಕಾರ್ಯಗಳಿಗೆ ₹ 2.41 ಲಕ್ಷ ಕೋಟಿ (35 ಬಿಲಿಯನ್​ ಡಾಲರ್​) ನೀಡುತ್ತಿರುವ ಬಿಲ್​​ ಆ್ಯಂಡ್​ ಮಿಲಿಂದ್ ಗೇಟ್ಸ್​ ಫೌಂಡೇಷನ್​ ನಂ. 1 ಸ್ಥಾನದಲ್ಲಿದೆ.

ಇ-ಕಾಮರ್ಸ್​ ದೈತ್ಯ ಅಮೆಜಾನ್ ಸಿಇಒ ಜೆಫ್ ಬೆಜೋಸ್​​ ಅವರು ₹ 8.60 ಲಕ್ಷ ಕೋಟಿ ( 125 ಬಿಲಿಯನ್ ಡಾಲರ್​) ಮುಖೇನ ಮೊದಲ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದೆ.

For All Latest Updates

TAGGED:

ABOUT THE AUTHOR

...view details