ಕರ್ನಾಟಕ

karnataka

ETV Bharat / business

ನನ್ನ ತಂದೆಯ ಒಂದು ವರ್ಷದ ವೇತನ ವಿಮಾನ ಟಿಕೆಟ್​ಗೆ ಕೊಟ್ಟು ಅಮೆರಿಕಕ್ಕೆ ಬಂದೆ: ಸುಂದರ್ ಪಿಚೈ

ನೀವು ಗಳಿಸಿದ ಜ್ಞಾನವನ್ನು ಸಂಭ್ರಮಿಸಬೇಕಾದ ಸಮಯದಲ್ಲಿ ನೀವು ಕಳೆದುಕೊಂಡದ್ದನ್ನು ದುಃಖಿಸುತ್ತಿರಬಹುದು. ಈ ರೀತಿಯ ಮಸುಕಾದ ಕ್ಷಣಗಳಲ್ಲಿ ಭರವಸೆ ಕಂಡುಕೊಳ್ಳುವುದು ಕಷ್ಟವಲ್ಲ. ನಿಮಗೆ ಎಲ್ಲವನ್ನೂ ಬದಲಾಯಿಸುವ ಅವಕಾಶವಿದೆ.

Google CEO Sundar Pichai
ಗೂಗಲ್ ಸಿಇಒ ಸುಂದರ್ ಪಿಚೈ

By

Published : Jun 8, 2020, 8:34 PM IST

Updated : Jun 8, 2020, 9:44 PM IST

ಸ್ಯಾನ್​ಫ್ರಾನ್ಸಿಸ್ಕೋ : 'ನನ್ನ ತಂದೆ ತಮ್ಮ ಒಂದು ವರ್ಷದ ವೇತನವನ್ನು ನಾನು ಅಮೆರಿಕಕ್ಕೆ ಬರುವ ವಿಮಾನ ಟಿಕೆಟ್​ಗಾಗಿ ಖರ್ಚು ಮಾಡಿದ್ದರು. ಹೀಗಾಗಿ ನಾನು ಸ್ಟ್ಯಾನ್​ಫೋರ್ಡ್​​ಗೆ ಬಂದು ಹಾಜರಾದೆ. ಅದು ನನ್ನ ಮೊದಲ ವಿಮಾನ ಪ್ರಯಾಣವಾಗಿತ್ತು' ಎಂದು ವೃತ್ತಿಯ ಆರಂಭಿಕ ದಿನಗಳನ್ನು ಗೂಗಲ್ ಸಿಇಒ ಸುಂದರ್ ಪಿಚೈ ಅವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಸಾಂಕ್ರಾಮಿಕ ಕೊರೊನಾ ವೈರಸ್​ ನಡುವೆ ಗೂಗಲ್ ವಿಡಿಯೋ ಪ್ಲಾಟ್​ಫಾರ್ಮ್​ ಯೂಟ್ಯೂಬ್ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ 2020ರ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಸುಂದರ್ ಪಿಚೈ ಅವರು, ಮುಕ್ತ, ಭರವಸೆ ಹಾಗೂ ತಾಳ್ಮೆಯಿಂದರಬೇಕು ಎಂದು ಕಿವಿಮಾತು ಹೇಳಿದರು.

ನಿಮ್ಮಲ್ಲಿ ಯಾರಾದರೂ ಕಲ್ಪಿಸಿಕೊಂಡಂತಹ ಪದವಿ ಸಮಾರಂಭ ಇದಾಗಿದೆ ಎಂದು ನಾನು ಭಾವಿಸುವುದಿಲ್ಲ. ನೀವು ಗಳಿಸಿದ ಜ್ಞಾನವನ್ನು ಸಂಭ್ರಮಿಸಬೇಕಾದ ಸಮಯದಲ್ಲಿ ನೀವು ಕಳೆದುಕೊಂಡದ್ದನ್ನು ದುಃಖಿಸುತ್ತಿರಬಹುದು. ಈ ರೀತಿಯ ಮಸುಕಾದ ಕ್ಷಣಗಳಲ್ಲಿ ಭರವಸೆಯನ್ನು ಕಂಡುಕೊಳ್ಳುವುದು ಕಷ್ಟವಲ್ಲ. ನಿಮಗೆ ಎಲ್ಲವನ್ನೂ ಬದಲಾಯಿಸುವ ಅವಕಾಶವಿದೆ ಎಂದು ಭರವಸೆ ತುಂಬಿದರು.

ಮುಕ್ತರಾಗಿ, ತಾಳ್ಮೆಯಿಂದಿರಿ, ಭರವಸೆಯಿಡಿ. ಇದನ್ನು ಮಾಡಲು ನಿಮ್ಮಿಂದ ಸಾಧ್ಯವಾದರೇ ಇತಿಹಾಸವು 2020ರ ಕ್ಲಾಸ್​ಗಳನ್ನು ಸ್ಮರಿಸಿಕೊಳ್ಳುತ್ತದೆ. ನೀವು ಕಳೆದುಕೊಂಡದ್ದಕ್ಕಾಗಿ ಅಲ್ಲ. ನೀವು ಏನು ಬದಲಾಯಿಸಿದ್ದೀರಿ ಎಂಬುದಕ್ಕೆ ಅದು ನೆನಪಿಟ್ಟುಕೊಳ್ಳುತ್ತದೆ. ಎಲ್ಲವನ್ನೂ ಬದಲಾಯಿಸಲು ನಿಮಗೆ ಅವಕಾಶವಿದೆ. ನಾನು ಆಶಾವಾದಿ ಆಗಿದ್ದೇನೆ ಎಂದರು.
1920ರ ಮಾರಕ ಸಾಂಕ್ರಾಮಿಕದ ಅಂತ್ಯಕ್ಕೆ ಪದವಿ ಪಡೆದವರು ಅಥವಾ 1970ರ ವಿಯೆಟ್ನಾಂ ಯುದ್ಧದ ನಡುವೆಯೂ ಪದವೀಧರರಿರಲಿ ಮತ್ತು ಅಮೆರಿಕದಲ್ಲಿನ 9/11 ದಾಳಿಗೆ ಕೆಲವು ತಿಂಗಳು ಮೊದಲು ಪದವಿ ಪಡೆದಿದ್ದ 2001ರ ವರ್ಗವೂ ಸಹ ವಿವಿಧ ಹಂತಗಳಲ್ಲಿ ತರಗತಿಗಳು ಸವಾಲುಗಳನ್ನು ಜಯಿಸಿದೆ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

Last Updated : Jun 8, 2020, 9:44 PM IST

ABOUT THE AUTHOR

...view details